ತಾನನಂದ್ರ ನಾನೋ ತಾನತಂದ್ರ ನಾನೋ
ತಂದಾನ ತೈದಾನೋ ತಾನಾನಾ || ೧ ||
ಶ್ವಾಮಿ ಇಂದ್ರ ಮೇನೋ ಭೂಮಿಯ ನೆನೆದಾನೋ
ಶ್ವಾಮಿ ಶಂಕರನಾ ನೆನೆವೇನೋ || ೨ ||
ಶ್ವಾಮಿ ಶಂಕರನಾ ನೆನವ ಗುಂಬಳತಾಯೇ ಭೂಮಿ
ಬಲ್ಲವರೇ ಹಾಡಾ ತೊಡಗಿರುವಾ || ೩ ||
ಬಲ್ಲವ್ರ ಹೇಳಿದ ಹಾಡೂ ಬಣ್ಣನೆ ವರಮುಂದಾ
ಯೆಣ್ಣೇಶೀ ಕೇಳಿ ಜನರೆಲ್ಲಾ
ಯೆಣ್ಣೇಶೀ ಕೇಳಿ ಜನ್ರರೆಪೊಗ್ಡೆ ಹೂಡೀ || ೪ ||
ಜನ್ರ ಕಟ್ಟಿರೂ ಯರ್ಡು ಯೆತ್ತಾ
ಯರಡ ಯೆತ್ತಿನ ಮೇಲೇ ಹೇರಿ ಬರುತದೇ ಬೆಲಿಯಲೇ || ೫ ||
ಹೇರಿ ಬರುತದೇ ಬೆಲಿಯಲ್ ಗೋಕನ ಶೂಲೆರೇ
ದುಡ್ಡಿಗೆ ವಂದು ವೀಲೆ ಮೆಲುವಾರೇ? ಮೆಲ್ದೂಕ್ ಗೋಕನ ಶೂಲೇರೂ
ತಾಶಿಗ್ವೊಂದು ಪತ್ರಾ ಬರೆವೋರೂ… ಬರೆವೋರೊ || ೬ ||
ಗಾಲಲೀ ಮೊಲ್ಯೇ ಬೆಲೆವೋಲೇ… ಬೆಲವರೆ ಗೊಕನ್ ಶೂಲೆರೂ
ತೋ ಲೇ ಗಾಲೀ ಬೀಶೂವೋರೇ || ೭ ||
*****
ಹೇಳಿದವರು: ಕುಪ್ಪ ಮಾರುಗೌಡ, ಕೂಜಳ್ಳಿ, ೫೫ ವರ್ಷ, ೧/೩/೭೭.
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.