ಮೋಸ ಹೋಗದಿರು

ದೇವರ ತಾಣವೆಲ್ಲಿ! ಎಂದು ಅರಸುತ್ತ
ಪಯಣವಿದು ಸಾಗುತ್ತಿದೆ ದೇವರೆಡೆಗೆ
ಬದುಕು ಇದು ಭವಪಾಶದತ್ತ ಸಾಗುವಾಗ
ಆತ್ಮವಿದು ವಾಲುತ್ತಿದೆ ತನ್ನ ಒಡೆಯನಡೆಗೆ

ಸುಖ ಸುಖ ಸುಖವೆಂದು ಅನವರತವು
ಹೋರಾಡುತ್ತಿರುವೆ ಆಸೆಗಳೊಂದಿಗೆ ನೀನು
ಆಸೆಗಳೆ ನಿನ್ನ ಮೃತ್ಯ ಕೂಪಗಳಾಗಿ
ಯೋಜಿಸುತ್ತಿವೆ ನಿನ್ನ ಪ್ರಪಾತಕ್ಕೆಳೆಯಲು

ಬಂಧು ಮಿತ್ರರೆಲ್ಲರೂ ನಿನ್ನ ನಂಬಿದವರು
ಸ್ವಾರ್ಥದಿಂದ ಅವರು ನಿನ್ನವರಾಗಿಹರು
ನೀನು ಅವರನ್ನು ಕಾಪಾಡದಿರೆ ಆಯ್ತು
ನಿನ್ನನ್ನೆ ಆಚೆತಳ್ಳಲು ಸಾಲಾಗಿ ನಿಂತಿಹರು

ಸಾಧು ಸಂತರ ಸೇವೆಗೆ ಹಗಲಿರುಳು ಶ್ರಮಿಸು
ನಿನ್ನ ಪಥಚಾಲಕರೆ ಅವರು ಸತ್ಯ
ಇಲ್ಲಿರುವೆದೆಲ್ಲ ಬರೀ ಮಾಯೆ ಮೋಹ
ಬರೀ ಸೊನ್ನೆ ಬಿದ್ದು ಹೋಗಲು ದೇಹ

ಸಹಕರಿಸಲು ನಿಂತಿರುವೆ ಇಂದ್ರಿಯಗಳೊಂದಿಗೆ
ದುಡಿಸುಕೊಳ್ಳು ನಿನ್ನ ಪಾರಮಾರ್ಥಕ್ಕೆ
ನಾಳಿನ ಭಾಗ್ಯಕ್ಕೆ ಇವರೆಲ್ಲ ಕಾರಣರಾಗಲಿ
ನೀನು ಮಾಣಿಕ್ಯ ವಿಠಲನಾಗಿರಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಭದ್ರೆ – ೧೦
Next post ಹಸಿರ ಬಾಂದಳದ ನಡುವೆ

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…