ಜೀವಾಣುಗಳ ಸಂಗಮಿಕೆಯಿಂದ ಈ ಜೀವ ಭೂಮಿಯ ಮೇಲೆ ಸೃಷ್ಠಿಯಾಯಿತೆಂದು ಅನೇಕರ ವಾದ. ಆದರೆ ಈ ಜೀವಸೃಷ್ಟಿ ಮಹಾಸಾಗರದ ತಳದಲ್ಲಿ ಕಾಣಿಸಿಕೊಂಡಿದ್ದ ಬಿರುಕುಗಳಿಂದ ಬರುವ, ಕರಗಿದ ಬಂಡೆಗಳಿಂದ ಕುದಿಯುವ ನೀರಿನಲ್ಲಿ ಈ ಜೀವ ಸೃಷ್ಟಿಗೊಂಡಿತೆಂದು ಇತ್ತೀಚೆಗೆ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಈ ನೀರಿನಲ್ಲಿ ಪ್ರಾಣವಾಯು ಏನೂ ಇರಲಿಲ್ಲ. ಅದರಲ್ಲಿ ಜಲಜನಕ ಸಲ್ಪ್ರೇಡ್ ಇತ್ತು. ಇಂಧನವು ಕೊಳೆತ ಮೊಟ್ಟೆಯಂತೆ ದುರ್ವಾಸನೆಯಿಂದ ಕೂಡಿತ್ತು ಈ ನೀರಿನಿಂದ ಅಲ್ಲಿಯ ಕಲ್ಲಿನಿಂದ ಅಗ್ನಿದಿಕ್ಷೆಯಾಗಿ ಆ ಬಂಡೆಯಲ್ಲಿ ಗಂಧಕ ಇದ್ದುದರಿಂದ ತಳವು ಗಂಧಕ ಮಯವಾಗಿತ್ತು. ಈ ಸ್ಥಳದಲ್ಲಿ ಪ್ರಥಮ ಜೀವಾಣು ರೂಪುಗೊಂಡಿತು.
ಆರಂಭದ ಕಾಲದಲ್ಲಿ ಜೀವರಾಶಿಗಳು ತಮ್ಮ ಶಕ್ತಿ ಅವಶ್ಯಕತೆಗಳನ್ನು ಜಲಜನಕ ಸೆಲ್ಫೈಡ್‌ಗಳಿಂದ ಪಡೆದುಕೊಂಡವು. ಈ ಕಾಲದ ಹಸಿರು ಸಸ್ಯಗಳು ಅದೇ ರೀತಿ ತಾವು ಬದುಕುವುದಕ್ಕೆ ಬೇಕಾದ ಸಕ್ಕರೆಯನ್ನು ನಿರ್ಮಿಸಿಕೊಳ್ಳುತ್ತವೆ. ನೀರು ಹೈಡ್ರೋಜನ್ ಆಕ್ಸೈಡ್‌ನಿಂದ ಕೂಡಿತ್ತು ಜತೆಗೆ ಕಾರ್ಬನ್ ಡೈ ಆಕ್ಸೈಡ್ ಕೂಡ ಇತ್ತು. ಜೀವನಿರ್ಮಾಣಗೊಳ್ಳುವುದಕ್ಕೆ ಹೆಚ್ಚು ಅತ್ಯಾಧುನಿಕವಾದ ರಸಾಯನದ ಕ್ರಿಯೆ ಬೇಕಾಗುತ್ತದೆ. ಅದು ಯುಗಗಳಿಂದ ಯುಗಗಳವರೆಗೆ ನಡೆದುಕೊಂಡು ಬಂದಿರುತ್ತದೆ. ಜೀವರಾಶಿಯು ೩೮೦ ಕೋಟಿ ವರ್ಷಗಳ ಹಿಂದೆ ಈ ಭೂಮಿಯ ಮೇಲೆ ಕಾಣಿಸಿಕೊಂಡ ಕಾಲದಿಂದಲೂ ಇಲ್ಲಿಯ ಜೀವ ಪರಿಸ್ಥಿತಿಯು ನಾಟಕೀಯ ರೀತಿಯಿಂದ ಬದಲಾವಣೆಗೊಂಡಿದೆ. ಆದರೆ ಜೀವ ಇಂದಿಗೂ ಸಮುದ್ರ ಕೆಳಗೆ ಜ್ವಾಲಾಮುಖಿಗಳಿಂದ ಬದುಕಿ ಉಳಿದಿದೆ. ಜೀವವನ್ನು ಪೋಷಣೆ ಮಾಡುವ ಕ್ರಿಮಿಗಳಿಗೆ ಭಾರಿ ಹೆಚ್ಚಿನ ಉಷ್ಣತಾಮಾನ ಬೇಕಾಗುತ್ತದೆ. ಅದು ಬಂಡೆಗಳ ರಾಸಾಯನಿಕ ಶಕ್ತಿಯಲ್ಲಿದೆ ಎಂದು ವಿಜಾನಿಗಳು ಹೇಳುತಾರೆ.
*****