ದಿನನಿತ್ಯ ವೈಜ್ಞಾನಿಕವಾಗಿ ಏನಾದರೊಂದು ಆವಿಷ್ಕಾರಗಳಾಗುತ್ತಲೇ ಇರುತ್ತವೆ. ಜೈವಿಕವಾಗಿ ಆರೋಗ್ಯದಲ್ಲಿ ಕೃಷಿರಂಗದಲ್ಲಿ ಹೀಗೆ ಹೊಸ ಹೊಸ ತಂತ್ರಜ್ಞಾನಗಳನ್ನು ಕಂಡು ಹಿಡಿಯಲಾಗುತ್ತದೆ. ಈ ಬಾರಿ ಹುಬ್ಬಳ್ಳಿಯ ಯುವ ಉತ್ಸಾಹಿ ಶಿವಾನಂದ ಮೂರ್ತಿ ಅವರು ಕೃಷಿ ಕ್ಷೇತ್ರಕ್ಕಾಗಿ ಹೊಸ ಮಾದರಿಯ ಸ್ಪ್ರೇಯರೊಂದನ್ನು ಸ್ವತಃ ತಯಾರಿಸಿದ್ದಾರೆ. ಈಗಿರುವ ಸ್ಪ್ರೇಯರ್‍ಗಳು ವಿಭಿನ್ನವಾಗಿ, ವೈಶಿಷ್ಟ್ಯವಾಗಿ ಮಾರುಕಟ್ಟೆಗೆ ಬಂದಿವೆ. ಈ ಸ್ಪ್ರೇಯರ್‌ನಿಂದ ಕಾರನ್ನು ಕಡಿಮೆ ನೀರಿನಿಂದ ತೊಳೆಯಲುಬಹುದು ಔಷಧಿಗಳನ್ನು ಸಿಂಪಡಿಸಬಹುದು. ನೆಲವನ್ನು ಸ್ವಚ್ಚಗೊಳಿಸಬಹುದು. ಹೀಗೆ ಬಹು ಉಪಯೋಗಿ ಯಂತ್ರ ಇದು. ಈ ಸ್ಪ್ರೇಯರ್‌ಗೆ ಒಮ್ಮೆಗಾಳಿ ತುಂಬಿಸಿ ಹೆಗಲಿಗೇರಿಸಿ ಸಿಂಪಡಿಸ ಹೊರಟರೆ ತುಂಬಿಸಿದ ದ್ರಾವಣ ಮುಗಿಯುವ ತನಕ ಗಾಳಿ ಹಾಕಬೇಕಿಲ್ಲ ಸ್ಪ್ರೇಯರ್ ಟ್ಯಾಂಕಿನಲ್ಲಿ ಗಾಳಿ ಒಳಹೋಗುವ ವಾಲ್ವ್ (ವಾಹನಗಳ ಟ್ಟೂಬ್ ವಾಲ್ವ ತರಹದ್ದು ಇದೆ. ಇದಕ್ಕೆ ಪೆಡಲ್ ಪಂಪ್‌ನಿಂದ ಗಾಳಿತುಂಬಿಬಿಡುವುದು ಗಾಳಿಯನ್ನು ೬೫.೭೦ ಗೇಜ್‌ನಷ್ಟು ತುಂಬಿದರೆ ಸಾಕು. ತುಂಬಿಸುವಾಗ ಹೆಚ್ಚಾದರೆ ಅದು ತನ್ನಿಂದ ತಾನೆ ಹೊರಹೋಗಲು ಆಟೋಮೆಟಿಕ್ ಸೆಫ್ಟಿ ವಾಲ್ವ ಇದೆ. ಇವೆರಡೂ ವ್ಯವಸ್ಥೆಗಳೂ ತೀರ ಸರಳವಾದವುಗಳು. ಮಾಮೂಲಿ ಟ್ರಾಕ್ಟರ್ ಟ್ಯೂಬ್‌ಗೆ ಏರ್‌ಇನ್ ಟೇಕ್‌ವಾಲ್ವನ್ನೆ ಬಳಸಲಾಗಿದೆ. ಎಲ್ಲ ಸುಲಭ ಸರಳ ವ್ಯವಸ್ಥೆಯಿಂದ ಕೂಡಿದ ಇದಕ್ಕೆ ಸ್ಪ್ರೇಮಾಡುವ ವಾಲ್ವ್ ಕೂಡಾ ಇದೇ ರೀತಿ ಇದೆ. ಸ್ಪ್ರೇಯಲ್ಲಿ ೩ ವಿಧದಲ್ಲಿ ಸಿಂಪರಣೆ ಮಾಡಲು ಅವಕಾಶವಿದೆ. ಮಿಸ್ಟ್ ಸ್ಪ್ರೇ ಸೇರಿದಂತೆ ಬೇರೆ ಬೇರೆ ಸಿಂಪರಣೆ ಸಾಧ್ಯವಿದೆ. ಸಣ್ಣಗಿಡಕ್ಕೆ ಸಣ್ಣ ತರದಲ್ಲೂ ದೊಡ್ಡ ಗಿಡಗಳಿಗೆ ದೊಡ್ಡದಾಗಿಯೂ ಬೇಕಾದಂತೆ ಸ್ಪ್ರೇ ಮಾಡುವ ವ್ಯವಸ್ಥೆಗಳಿದ್ದು ದ್ರಾವಣ ಅನವಶ್ಯಕವಾಗಿ ವ್ಯಯವಾಗುವುದಿಲ್ಲ. ಇದಕ್ಕಾಗಿ ಸ್ಪ್ರೇಯರ್ ಟ್ಯಾಂಕಿಯಲ್ಲಿ ಕಂಟ್ರೋಲ್ ವಾಲ್ವ್ ಇದೆ. ಸ್ಯಾಪ್‌ಸ್ಯಾಕ್ ಸ್ಪ್ರೇಯರ್ ಆಗಿಯೂ, ಗಟೋರ್ ಸ್ಪ್ರೇಯರಾಗಿಯೂ ಪವರ್ ಸ್ಪ್ರೇಯರ್ ಆಗಿಯೂ ಬ್ಯಾಟರಿ ಸ್ಪ್ರೇಯರ್ ಆಗಿಯೂ ಇದು ರೈತರಿಗೆ ಇದು ಅತ್ಯಂತ ಅನುಕೂಲಕರವಾಗಿದೆ.
ಸ್ಪ್ರೇಯರ್ ಟ್ಯಾಂಕಿಯನ್ನು ಅನುಕೂಲಕ್ಕಾಗಿ ಎರಡು ಬಗೆಯಲ್ಲಿ ತಯಾರಿಸಲಾಗಿದೆ. ೧೬ ಗೇಜಿದ ಗ್ಯಾಲ್ವ್‌ನೈಸ್ಡ್ ಕಬ್ಬಿಣದಲ್ಲಿ ಮಾಡಿದ ಟ್ಯಾಂಕಿ ಒಂದಾದರೆ ಇನ್ನೊಂದು ಸ್ಟೀಲಿನದು. ದ್ರಾವಣ ಯಾವುದೇ ರೀತಿಯ ರಾಸಾಯನಿಕ ಕ್ರಿಯೆಗೆ ಹಾಳಾಗದಿರುವಂತೆ ರಬ್ಬರ್‌ಕೋಟ್ ಗಾಲ್ವಾ ಮತ್ತು ಪ್ಲಾಸ್ಟಿಕ್‌ಗಳಿಂದ ಕೋಟ್ ಮಾಡಲಾಗಿದ್ದು ಯಾವುದೇ ರಾಸಾಯನಿಕ ಪರಿಣಾಮಕ್ಕೆ ಒಳಪಡಲಾರದು. ಶಿವಾ ಆಗ್ರಿ ಸ್ಪ್ರೇಯರ್ ಎಂಬ ಬ್ರ್ಯಾಂಡಿನಲ್ಲಿ ಇದನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
*****