ಬಹೀರಮುಖ ಜಗತ್ತನ್ನು ಮರೆ
ಅಂತರ ಮುಖನಾಗಿ ನೀನು ಚಲಿಸು
ಹೊರಗಿನ ಸೌಂದರ್‍ಯ ಕ್ಷಣಿಕ
ಒಳಗಿನ ಸ್ವರೂಪವೆ ಧನ್ಯ
ಮನಸ್ಸನ್ನು ಬಗ್ಗಿಸಿ ಹಿಡಿಯಬೇಕು
ಹೆಜ್ಜೆ ಹೆಜ್ಜೆ ಅದಕ್ಕೆ ತಿದ್ದಬೇಕು
ಅದು ಇಚ್ಛಿಸಿದಂತೆ ನಿ ಬಯಸದಿರು
ನಿನ್ನ ಇಚ್ಛೆ ಕಾಣಲು ಮನ ತವಕಿಸಬೇಕು
ಹೊರಗಿನ ಆಡಂಬರಗಳಿಗೆ ನೋಡದಿರು
ಪರರನ್ನು ಮೆಚ್ಚಿಸಲು ವರ್‍ತಿಸದಿರು
ನಿನ್ನ ಕಷ್ಟ ಸುಖಕ್ಕೆಲ್ಲ ಯಾರು ಹೊಣೆ?
ಅವರನ್ನು ರೂಪಿಸಲು ನೀ ನಾರು?
ಬದುಕಿನ ಈ ಕ್ಷಣ ಕ್ಷಣಗಳು ನಾಶದತ್ತ
ಶರೀರ ಸುಖ ಬಯಸಿ ವಿನಾಶಿಯಾಗಲಿದೆ
ನೀನು ಮಾತ್ರ ನಿತ್ಯ ಅವಿನಾಶಿ
ನಿನ್ನ ಧರ್‍ಮವೆ ನಿನ್ನ ಕಾಯಲಿದೆ
ನೀನು ಈಗಲೇ ಅಚಲನಾಗಿರು
ನಾಳೆಯೆಂಬುದೆಲ್ಲ ಬರೀ ಗೊಳ್ಳು
ಈ ಕ್ಷಣಗಳು ಈಗ ಅತ್ಯಮೂಲ್ಯ
ಮಾಣಿಕ್ಯ ವಿಠಲನಾಗಿ ಪಾವನಗೊಳ್ಳು
*****