ಶೋಷಣೆ

ಹಿಂದೆ-
ನಿನ್ನ ಅಂಗಅಂಗಗಳ ಅಂದವ
ಆರಾಧಿಸುತ್ತಾ ಶೋಷಿಸಿದರು;
ನಿನ್ನ ಪೂಜಿಸುತ್ತಾ ಶೋಷಿಸಿದರು.
ಗೋಡೆ ಮೇಲಿನ ಚಿತ್ರವಾಗಿಸಿದರು
ಮನೆಯೊಳಗಿನ ಗೃಹಲಕ್ಷ್ಮಿಯಾಗಿಸಿದರು.

ಇಂದು-
ನಿನ್ನ ಉಬ್ಬುತಗ್ಗುಗಳ
ಅಳೆಯುತ್ತಾ ಶೋಷಿಸುತ್ತಿದ್ದಾರೆ.
ನಿನ್ನ ದೇಹದ ಬಳಕುವಿಕೆಯ
ಸೆರೆಹಿಡಿಯುತ್ತಾ ಶೋಷಿಸುತ್ತಿದ್ದಾರೆ.

ಅವರು ಹೇಳಿದಂತೆ
ನೀನು ನಿನ್ನಂಗ ಪ್ರದರ್ಶನಗಳಿಗೆ
ಬೆತ್ತಲಾಗುತ್ತಾ ಬಂದುದೇ
ನಿನ್ನ ಶೋಷಣೆಗೆ ಕಾರಣವೆಂದು
ನೀನೇಕೆ ತಿಳಿಯದಾದೆ?

ನೀನು ಪ್ರದರ್ಶನದ ವಸ್ತುವಾದೆ,
ಕರತಾಡನಗಳ ಶಬ್ದಗಳಲ್ಲಿ ಮೈಮರೆತೆ
ಶೋಷಣೆಗೊಳಗಾಗುವುದರಲ್ಲೆ
ನೀ ತೃಪ್ತಳಾದೆ-
ಇದು ನಿನಗೆ ನೀನೇ ಹಾಕಿಕೊಂಡ
ಉರುಳಲ್ಲವೇನು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೆಡದೆಯೇ ಕೆಟ್ಟವನು ಎನ್ನಿಸುವುದಕ್ಕಿಂತ
Next post ದುಃಖ

ಸಣ್ಣ ಕತೆ

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…