ಹೊಸಕವಿತೆ
ಬರೆಯ ಹೊರಟಾಗ
ನನಗರಿವಾಯಿತು
ನನ್ನೊಡಲು ಬರಿದಾಗಿದೆಯೆಂದು!
ಹಳೆಯ ಕವಿತೆಗಳೆಲ್ಲ
ಸತ್ತು ಹೋಗಿದ್ದವು
ಹೊಸ ಹುಟ್ಟಿಗೆ
ಜೀವ ಭಾವ ಕಾದುಕೊಂಡಿತ್ತು
ಆದರೆ ಹೊಸ ಕವಿತೆ ಹುಟ್ಟಲಿಲ್ಲ!
ಮನಸ್ಸು ಭಾವದ ಸಂಭೋಗವಾದರೂ
ಹೊಸಹುಟ್ಟು ಉದಯಿಸಲಿಲ್ಲ.
ಹೇಗೆ ಕಳೆಯಲಿ ಈ ಬಂಜೆತನ?
ಮನಸ್ಸು ಖಾಲಿಯಾದ
ಭಾವ ಬರಡಾದ ಈ ಜಡತನ?
ಹೊಸ ಕವಿತೆ ಹುಟ್ಟಬೇಕು
ಸತ್ತು ಹೋದ ಹಳೆಕವಿತೆಗಳಿಗೆ
ಮತ್ತೆ ಜೀವ ತುಂಬಬೇಕು.
ಯಾವ ಭಾವ ವೀರ್ಯ
ಕಳೆಯಬಹುದು ಮನದ
ಈ ಬಂಜರುತನ?
*****
Related Post
ಸಣ್ಣ ಕತೆ
-
ಏಕಾಂತದ ಆಲಾಪ
ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…
-
ಉರಿವ ಮಹಡಿಯ ಒಳಗೆ
ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…
-
ಎರಡು…. ದೃಷ್ಟಿ!
ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…
-
ಯಾರು ಹೊಣೆ?
"ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…
-
ಹನುಮಂತನ ಕಥೆ
ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…