ರಾಮು ಹಳ್ಳಿ ಬಾಲಕ
ಇಟ್ಟಿಹ ರಕ್ತದ ತಿಲಕ
ಅವನ ಆಶೆ ಸೈನಿಕ
ಆಗೋ ಮಾತು ಕೇಳಿ
ಅಪ್ಪ ಅಮ್ಮ ಓದಿಲ್ಲ
ದೇಶ ಅಂದರೆ ಗೊತ್ತಿಲ್ಲ
ನಾನು ಓದಲು ಕಲಿಸುವೆ
ದೇಶ ಭಕ್ತಿಯ ಬೆಳೆಸುವೆ
ನಿತ್ಯ ನಿಯಮಿತ ವ್ಯಾಯಾಮ
ದೇಹಕೆ ಹೊಸದು ಆಯಾಮ
ಎತ್ತರ ದಪ್ಪ ಬೆಳೆಯುವೆ
ಸೈನ್ಯಕೆ ಭರ್ತಿ ಆಗುವೆ
ಸಮವಸ್ತ್ರವನು ಧರಿಸುವೆ
ಕೈಯಲಿ ಗನ್ನನು ಹಿಡಿಯುವೆ
ಪಡೆವೆನು ಕೊಡುವ ತರಬೇತು
ಆಡುವುದಿಲ್ಲ ಬರಿ ಮಾತು
ಹಗಲಿರುಳೆನ್ನದೆ ಗಡಿಯನ್ನು
ಕಾಯುತ ತೀರಿಸುವೆ ಋಣವನ್ನು
ವೈರಿಯ ಸೊಲ್ಲನು ಅಡಗಿಸುವೆ
ದೇಶದ ಕೀರ್ತಿಯ ಮೆರೆಸುವೆ
ಶಾಂತಿ ಸಹನೆ ಸಹಬಾಳ್ವೆ
ನಮ್ಮಯ ಧೈಯವು ಗೆಲ್ಗೆ
ಬೆನ್ನಲಿ ಚೂರಿ ಹಾಕಿದರೆ
ತಂದು ಹಾಕುವೆ ಕೈಸೆರೆ
ಪ್ರಸಂಗ ಬಂದರೆ ಬಲಿದಾನ
ತಾಯಿಗಿಂತ ಜೀವ ಮಿಗಿಲೇನ?
ಮಾರ್ದನಿಗೊಳ್ಳಲಿ ಜೈಹಿಂದ್
ಇನ್‌ಕಿಲಾಬ್ ಜಿಂದಾಬಾದ್
*****