ಬಾರೋ ಬಾರೋ ಚಂದಮಾಮ
ನಿನ್ನಯ ಅಂದಕೆ ಯಾರು ಸಮ
ಒಟ್ಟಿಗೆ ಮಾಡೋಣ ಊಟ
ಆಮೇಲೆ ಆಡೋಣ ಆಟ
ದಿನವೂ ಕರೆವಳು ನನ್ನಮ್ಮ
ನಕ್ಕು ನಗಿಸು ನೀನಮ್ಮ
ಇರುವೆ ಏಕೆ ನೀನಲ್ಲೇ
ಬಂದು ಬಿಡು ನೀ ನಮ್ಮಲ್ಲೇ
ರೊಟ್ಟಿಯ ಗಾತ್ರಕೆ ನೀನಿದ್ದೆ
ಕಿಲಕಿಲವೆಂದು ನಗುತ್ತಿದ್ದೆ
ಈ ದಿನ ಏಕೆ ಸಪ್ಪಗಾದೆ
ಗಾತ್ರದಿ ಏಕೆ ಸಣ್ಣಗಾದೆ
ನಿನ್ನಯ ಬೆಳಕು ಬಲು ತಂಪು
ಆಡಲು ಆಗ ಬಲು ಹುರುಪು
ಬಾನಲ್ಲಿದ್ದರು ನೀನು
ಗೆಳೆಯರು ನೀನು ನಾನು.
*****