ಗೋಡ್ರ ಎಂಡ್‌ಲೆಸ್‌ ಸ್ಟೋರಿ ಎಡವಿದ ಯಡಿಯೂರಿ !

ಜೆಡಿ(ಎಸ್) ಅಂದ್ರೆ ಜನತಾದಳ ಸನ್ಸ್ ಯಾನೆ ಗೋಡ್ರ ಸನ್ಸ್ ಅಂತ ಸಾಬೀತಾಗೋತು ನೋಡ್ರಿ. ಯಾಕಂತಿರಾ, ಸೆಕ್ಯುಲರ್ ಅಂದ್ರೇನು ಅಂತ್ಲೆ ಪಟ್ಟಾಧಿಕಾರಿ ಕುಮಾರಂಗೆ ಗೊತ್ತಿಲ್ಲಂತೆ ಪಾಪ. ಅಪ್ಪ ಮಕ್ಳು ಸಪರೇಟ್ ಆಗಿ ಕಂಡಕಂಡ ದೇವರಿಗೆಲ್ಲಾ ಕಾಯಿ ಒಡೆಸಿ ‘ಸಿ‌ಎಂ ಪಟ್ಟ ಖಾಯಂ’ ಮಾಡ್ಸು ಅಂತ ಪ್ರೇಯರ್ ಮಾಡಿದ್ದಾತು. ಊರು ಸೀಮ್ಯಾಗಿರೋ ಮಠಾಧೀಶ್ವರರೆಲ್ಲಾ ಅಡ್ಡತರುಬಿ ಅಡ್ ಬಿದ್ದು ಸಪೋಲ್ಟ್ ಕೇಳಿದ್ದಾತು. ತೀರ್ಥಯಾತ್ರೆ ಮುಗಿದು ಅಪ್ಪ ಮಕ್ಳ ಮನದಾಶೆ ಈಡೇರಿದ್ರೂ ಗೋಡ್ರ ನಾಟ್ಕ ಮುಗೀವಲ್ದು! ಈಗ್ಲೂ ಮಾದೇಶನಾಣೆಗೂ ನಾನು ಮಗನಿಗೆ ಎಗೆನೆಸ್ಟ್… ನಾನು ಹಿರಣ್ಯಾಕ್ಷ ಅಂವ ಪ್ರಹ್ಲಾದ. ಆದರೆ ನರಸಿಂಹನ ರೋಲೂ ನಂದೇಯಾ. ನಾನು ಕರಳು ಬಗೆಯೋದು ಕಾಂಗ್ರೆಸ್ಸಿಂದು ಅಂತ ಸ್ವಾಟೆ ಓರೆ ಮಾಡಿ ಇಚಿತ್ರ ಸ್ಟೈಲ್ ಕೊಡ್ಲಿಕತ್ತಾರೆ. ಫೆಬ್ರವರಿ ೨೧ ರಂದು ಜೆಡಿ‌ಎಸ್‌ನ ೪೧ ಸ್ಯಾಸಕರೂ ಕಿಕ್ ಅಂಡ್ ಲೆಗ್ಡ್ಫ಼್ ಔಟ್ ಮಾಡ್ತೀವ್ನಿ ಅಂತ ದೆಹಲಿಯ ವಕ್ತಾರರ ಮುಂದೆ ಕೈನಾಗೆ ಕರ್ಪೂರ ಹಚ್ಕೊಂಡು ಆಣೆ ಮಾಡವರೆ. ಆದರೆ ವಕ್ತಾರರಗೂ ನಂಬಿಕಿಲ್ಲ. ಈಗ ಮಗ ಸೆಕ್ಯುಲರ್ ಸಿದ್ದಾಂತ ಸಮಾಧಿ ಮಾಡಿ ೨ ತಿಂಗಳಾದ್ರೂ ಗೋಡ್ರು ತಮ್ಮ ಮಗನ್ನ ಉಳಿದ ಸ್ಯಾಸಕನ ಉಚ್ಚಾಟಿಸ್ದೆ ಮಾಡ್ತಿರೋ ಡ್ರಾಮಾ ನೋಡಿ ಸುರೇಂದ್ರ ಮೋಹನ್, ವೀರೇಂದ್ರ ಕುಮಾರ್ ಅಂಡ್ ಪಾರ್ಟಿ ಗರಂ ಆಗವರೆ. ಗೋಡ್ರು ಬಾಹರ್ ದ್ರ್ಯಾಬೆಮಕ ತೋರಿಸ್ತಾ ಮಗನ ದಿಗ್ವಿಜಯವನ್ನೆಲ್ಲಾ ಟಿವಿನಾಗೆ ಕಣ್ ಬಿಟ್ಕಂಡು ನೋಡ್ತಾ ಪ್ರಾಂಜಲ ನೇತ್ರರಾಗಿದ್ದಾರೆ. ಅಳ್ತಿಲ್ಲ ಕಣ್ರಿ ಗೋಡ್ರ ನಾಟ್ಕ ಮೆಗಾ ಧಾರವಾಹಿ ಇದ್ದಂಗೆ ಮುಗಿಯೋ ಗ್ಯಾರಂಟಿಲ್ಲ.

ಇದೆಲ್ಲ ಏನಾರ ಹಾಳಾಗಿ ಹೋಗ್ಲತ್ತ. ಸುಮ್ಗಿರಲಾರ್ದೆ ತಿಕದಾಗೆ ಇರುವೆ ಬಿಟ್ಕಂಡ ಕೂಗುಮಾರಿ ಯಡೂರಿ, ದೊಡ್ಡ ಸ್ಥಾನಕ್ಕೆ ಏರಿದರೂ ಅಸಲಿ ಬುದ್ಧಿ ಬಿಡ್ದೆ ಗೋಡೆಮ್ಯಾಗೆ ಅದರ ಪಾಡಿಗಿದ್ದ ಅಂಬೇಡ್ಕರ ಪಟ ಇಂದಿರಮ್ಮನ ಪಟ ತೆಗಿಸಿ ಬೆಣೆ ತಕ್ಕಂಡ ಮಂಗ್ಯಾ ಆಗದೆ. ಇಂದಿರಮ್ಮನ ಮ್ಯಾಗೆ ಹಳೆ ದ್ವೇಸ ಐತೆ ಬಿಡ್ರಿ.. ಆದರೆ ಅಂಬೇಡ್ಕರ್ ಪಟನ ಟಚ್ ಮಾಡಿದ್ರಾಗೆ ಬಿಜೆಪಿಗಳ ಅಂತರಾಳದಾಗೆ ಏಟು ದಲಿತಪ್ರೇಮ ಹೊಕ್ಕೊಂಡೇತೆ ಅಂಬೋದು ಬಟಾಬಯಲಾಗೋತು ನೋಡ್ರಿ. ಕಲಿತ ಬುದ್ಧಿ ಬಿಡೆ ಕಳ್ಳಮುಂಡೆ ಅಂದ್ರೆ ನಡಂತ್ರ ಬಿಟ್ಟೇನು ಮಣ್ಣ ಹೊಯ್ಕಳೆ ಅಂದಂಗಾಗೇತಿ. ಯಡೂರಿ ಪತರಗುಟ್ಟಂಗಾಗಿ, ನಾನು ಶಿವನಾಣೆ ಪಟ
ತೆಗಿಸಿದ್ದು ರೂಮ್ ಕಿಲೀನ್ ಮಾಡಿಸೋಕೆ ಅಂದೇತೆ. ರೂಮ್ ಕಿಲೀನ್ ಮಾಡ್ಸೆ ಅಲ್ಲೇನ್ಲೇ ಯಡೂರಿ ರೂಮ್ಗೆ ಎಂಟ್ರಿ ಕೊಟ್ಟಿದ್ದು? ಬೇರೆಯೋರ ಪಟ ಹಂಗೆ ಬಿಟ್ಟು ಇವು ಎಲ್ಡೇ ಯಾಕೆ
ತೆಗಿಸ್ದೆ ಬೊಗಳು ಅಂತ ದಲಿತ ಸಂಘಟನೆಗಳು ರಾಜ್ಯದಾದ್ಯಂತ ದಾಂಧಲೆ ಎಬ್ಬಿಸವೆ. ‘ರಾಜಿನಾಮೆ ಬಿಸಾಕಲೆ ಹಳೆ ಚಡ್ಡಿ’ ಅಂತ ಕೆಲವರು, ‘ಸಾರಿ ಕೇಳ್ಳೇ ಯಡವಟ್ಟು ಯಡ್ಡಿ’ ಅಂತ ಹಲವರು ಯಡೂರಿ ಗೊಂಬೆ ಮಾಡಿ ಸುಡ್ಲಿಕ್ಕತ್ತಾರೆ. ಕಳ್ಳನ ಹೆಣ್ತಿ ಎಂದಿದ್ರೂ ಮುಂಡೆ ಅಂಬಂಗೆ ಆಸಲಿ ಬುದ್ಧಿ ಬಿಗಿನಿಂಗ್ನಾಗೇ ತೋರಿಸಿ ಬಿಟ್ರಿಲ್ಲೋ ಕಮಲ ಮುಖಿಗಳಾ ಅಂತ ಕಾಂಗ್ರೆಸ್ ಮುಖಿಗಳು ಮುಸಿಮುಸಿ ನಗ್ಲಿಕತ್ತಾವೆ. ಬೆದರು ಗೊಂಬೆಯಂತಾದ ಯಡೂರಿ ಅಗ್ದಿ ಕಂಗಾಲಾಗೈತಿ. ನಾನು ದಲಿತ ಪ್ರೇಮಿ. ಶಿವವೂಜೆ ಮಾಡಕಿಂತ ಮುಂಚೆ ದಲಿತರ ಮನಿಗೋಗಿ ಉಂಡೀರಾ ಉಪಾಸಿದೀರಾ ಅಂತ ಕೇಳ್ಕಂಡು ಬಂದೇ ಉಣ್ತೀನಿ. ಬೇರ್ಷರತ್ ಸಾರಿ ಕೇಳ್ತಿನಿ. ಜಗತ್ತಿನ ಎಲ್ಲಾ ಸಣ್ಣಪುಟ್ಟ ಕಚೇರಿನಾಗೂ ಆಂಬೇಡ್ಕರ್ ಪಟ ಬ್ಲೋ‌ಅಪ್ ಮಾಡ್ಸಿ ಗೋಡೆ ತುಂಬಾ ಅಂಟಿಸಾಕೆ ಆಲ್ಡರ್ ಹೊಂಡಿಸ್ತೀನ್ರಪಾ ನನ್ನನ್ನು ನಂಬಿ. ನಾನು ಬ್ರಾಮಿನ್ ಅಲ್ಲ ಅಪ್ಪಟ ಬಸವಭಕ್ತ ಎಂದು ಒಂದೇ ಕಣ್ಯಾಗೆ ಅಳ್ತಾ ಮಾರಿಗಂಟಿಕ್ಕಿ ಕೂಗಾಡ್ಲಿಕತ್ತದೆ. ಯಡೂರಿದು ಒಂಟು ಧ್ವನಿ ಅನಂತಿಯಾಗ್ಲಿ ಪೋಸ್ಟರ್ನಾಗೆ ತನ್ನ ಮಾರಿ ಇಲ್ಲ ಅಂತ ಮುನಿದ ಶೆಟ್ಟರ್ ಆಗ್ದಿ ಉಸಿರೆತ್ತವಲ್ಲರು. ಜೆಡಿ‌ಎಸ್ನೋರೋ ತಂದೂರಿ ತಿಂದಷ್ಟು ಒಳ್ಗೇ ಖುಷಿ. ಈ ಕಾಂಗೈಗಳು ಕೇಕೆ ಹಾಕ್ತಾ – ‘ದಲಿತರು ಸಾಬರ್ಗೆ ಕಾಂಗೈ ನೆಂಟಸ್ತನ ಬಿಟ್ರೆ ಬೇರೆಕಡೆ ನೋ ಸ್ಥಾನ ನೋ ಮಾನ’ ಅಂತ ಪಾಪ್ ಸಾಂಗ್ ಹಾಡ್ಲಿಕತ್ತಾವೆ. ಆದ್ರೂ ಯಡೂರಿ ಬಿಡಂಗಿಲ್ಲ‘ಸದಾ ವತ್ಸಲೆ ಮಾತೃಭೂಮಿ ಜನ್ಮ ಇರೋಗಂಟ ನಾ ದಲಿತ ಪ್ರೇಮಿ’ ಅಂತ ಲವ್‌ಸಾಂಗ್ ಹಾಡಿದ್ರೂ ಯಾರೂ ನಂಬವಲ್ರು ನೋಡ್ರಿ ದಿನಾ ಟವಿನಾಗೆ ಗೋಡ್ರು ಕಣ್ಣೀರು ಹಾಕದ್ನ ನೋಡಿ ಜನ ನಗೋವಷ್ಟು ಶಾಣ್ಯಾರಾಗ್ಯಾರೆ ಅಂದ ಮ್ಯಾಗೆ ಯಡೂರಿ ಲವ್‌ಸಾಂಗ್ ನಂಬ್ತಾರಾ?

ನಾನೇ ಫೈನಾನ್ಸ್ ಅಬ್ಕಾರಿ ಎಲ್ಲಾ ಖಾತೆ ಮಡಿಕ್ಕಂಡಿವ್ನಿ. ಎಸ್‌ಸಿ, ಎಸ್‌ಟಿ ಗಳ ಡೆವಲಪ್‌ಮೆಂಟ್ಸ್‌ಗೆ ಕೋಟಿಗಟ್ಟಲೆ ಸ್ಯಾಂಕ್ಷನ್ ಮಾಡ್ತೀನಪ್ಪೋ ಬಿಲೀವ್ ಮಿ. ಈಗಾಗಲೇ ಮತ್ತೆ ಅಂಬೇಡ್ಕರ್ ಪಟ ನೇತುಹಾಕಿ ರೇಷ್ಮೆ ಗಾರ್ಲೆಂಡ್ ಹಾಕ್ಸಿನಿ. ಎಕ್ಸ್‌ಕ್ಯೂಜ್ ಮಿ ಆಂತ ಯಡೂರಿ ಮೈ ಪರಚಿಕೊಳ್ಳಿಕತ್ತಾರೆ. ಇರೋ ೪೦ ತಿಂಗಳಲ್ಲಿ ೨೦ ತಿಂಗಳು ಸರದಿಮ್ಯಾಗೆ ಮಂತ್ರಿಗಳನ್ನು ಮಾಡೋ ಆಲೋಚನೆ ಐತೆ ಅಂತ ಮಣ್ಣಿನ ಮೊಮ್ಮಗ ಕೋಮಾರ ಅನೌನ್ಸ್ ಮಾಡವರಂತೆ. ಹಂಗಂದಮ್ಯಾಗೆ ೪೦ ತಿಂಗಳದಾಗೆ ದಿನಕ್ಕೆ ಒಬ್ಬನ್ನ ಮಂತ್ರಿ ಮಾಡ್ತಾ ನಮ್ಮ ಎಲ್ಲಾ, ೭೯ ಸ್ಯಾಸಕರಿಗೂ ಮಂತ್ರಿ ಆಗೋ ಚಾನ್ಸ್ ಕೊಡ್ತೀನಿ ಅಂತ ಪ್ರಾಮಿಸ್ ಮಾಡಿ ತನ್ನ ಪಾರ್ಟಿ ಮಂದಿನಾ ಯಡೂರಿ ಖುಷಿ ಪಡಿಸ್ತಾರಂತ ನ್ಯೂಸ್ ಹಬ್ಬೇತಿ. ಇನ್ನು ಎಂಪಿ ಪ್ರಕಾಸು ಸಿಂದ್ಯಾ ಗೋಡ್ರ ಎದುರು ಮುನಿಸ್ಕೊಂಡು ಕುಂತ್ರೆ ಗೋಡ್ರು, ಹೇಳಿದ್ದು ಕಡ್ಡಿ ಮುರಿದಂಗೆ
ಒಂದೇ ಮಾತು. ‘ನೋಡಿದ್ರಾ ನಿಮ್ಮ ಸ್ಥಿತಿನಾ! ನಿಮ್ಮಿಬ್ಬರ ಹಿಂದೆ ಒಬ್ಬರಾನಾ ಸ್ಯಾಸಕರೆ ಅವರಾ?’ ಎಂದು ಪ್ರಶ್ನಿಸಿದ ಗೋಡ್ರ ಮಾತಿನಾಗೆ ಇದ್ದದ್ದು ಅಪನಂಬಿಕೆಯೋ! ಅನುಕಂಪವೋ? ಅಪಹಾಸ್ಯವೋ ಮೂಕಳಾಗಿ ಕುಂತಿರೋ ತಾಯಿ ಮೂಕಾಂಬಿಕೆಯೇ ಬಲ್ಲಳು. ಯಾವುದು ಹೆಂಗಾರ ಇರ್ಲಿ ಹೊರೆ ಹೊತ್ತ ಮಹಿಳೆನಾ ಮೂಲೆಗೆ ತಳ್ಳಿ ಅರಳ್ತಿರೋ ಕುಮಾರ ಛಲ ಬಿಡದ ತ್ರಿವಿಕ್ರಮನಂಗೆ ಬಹುಮತ ಸಾಬೀತು ಮಾಡವ್ನೆ.

ಬಿಜೆಪಿ ಜೆಡಿ‌ಎಸ್‌ನ ಹನಿಮೂನ್ ಆರಂಭವಾಗೇತೆ. ಇವರ ಹಿಂದಾಗಡೆ ಆರ್‌ಎಸ್‌ಎನ್ನೋರು ದೊಣ್ಣೆ ಹಿಡ್ಕೊಂಡು ಪಹರೆಗೆ ನಿಂತಾರೆ. ಮುಂದೇನಾಯ್ತದೋ ಗೋಡ್ರ ಗೋಡದ್ಯಾವ್ನೆ ಬಲ್ಲ.
*****
( ದಿ.೨೦-೦೨-೨೦೦೬)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೋಸ್ತು ದೋಸ್ತು ನ ರಹಾ…ಗೋಡ್ರ ಪ್ಯಾರುನರಹಾ…?
Next post ಎಲ್ಲೆ

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…