ನನ್ನ ನಗುವಿನ ಹಿಂದೆ
ಅಡಗಿದ ಸಾವಿರ ಸತ್ಯಗಳಿವೆ.
ಹರಿದ ಬಟ್ಟೆಗೆ ಹಚ್ಚಿದ
ಹಲವಾರು ತೇಪೆಗಳಿವೆ.
ಒತ್ತಾಯದ ನಗೆಯನ್ನು
ಮತ್ತೇ ಮತ್ತೇ
ಬರಿಸಬೇಕಿದೆ ಮುಖದಲಿ
ನೋವನ್ನು ಹಲ್ಲು ಕಚ್ಚಿ
ಕಣ್ಣು ಮುಚ್ಚಿ ಸಹಿಸಬೇಕಿದೆ.
ಮನದ ಆಳದ ನೋವಿನ
ವಿಷ ತುಂಬಿದ ಗುಟುಕುಗಳ
ತುಟಿ ಎರಡು ಮಾಡದೇ
ನುಂಗಿ ನಗಬೇಕಿದೆ.
ಸನ್ನೆಯಿಂದ ಕಣ್ಣು ಮಿಟುಕಿಸಿ
ಕಪ್ಪು ಕತ್ತಲೆಗೆ ಕರೆವ
ಬುಸುಗುಡುವ ಗೂಳಿಗಳಿಗೆ
ನಗೆಯ ಮುಖವಾಡ
ಧರಿಸಿ ಭೂಮಿಯಾಗಬೇಕಾಗಿದೆ.
ಹಸಿದ ಕಂದಮ್ಮಗಳ
ರೋದನ ಆಕ್ರಂದನ
ಕಿವಿಗೆ ಬೀಳುವಾಗ
ತುಟಿಕಚ್ಚಿ ಹೃದಯ
ಕಲ್ಲು ಮಾಡಿಕೊಂಡು ಸಹಿಸಬೇಕಿದೆ,
ಲೋಕದಲಿ ದಿನದಿನವೂ
ಸಾಯುತ್ತ ನೋವನ್ನು
ಸಹಿಸುತ್ತ ಬದುಕಬೇಕಿದೆ
ಸುಂದರ ನಾಳೆಯ ಕನಸುಗಳ ಕಾಣುತ್ತ
ಜೋಗುಳ ಹಾಡುತ್ತ ಕರುಳ ಕುಡಿಗಳ
ತಟ್ಟಿ ಮಲಗಿಸಬೇಕಿದೆ.
*****
Related Post
ಸಣ್ಣ ಕತೆ
-
ದಿನಚರಿಯ ಪುಟದಿಂದ
ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…
-
ಉಪ್ಪು
ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…
-
ಕುಟೀರವಾಣಿ
ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…
-
ಪತ್ರ ಪ್ರೇಮ
ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…
-
ಕಳಕೊಂಡವನು
ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…