ಮರವಿನ ಮನವೆ!

ಗುರುದೇವನ ಕೃತಿ ಸೃಷ್ಟಿಯು|
ಹಿರಿದಾದುಪಕಾರ ಮನುಜ ಜನ್ಮದ ಮೇಲೆ ||
ಮರೆವುದು ಥರವಲ್ಲೆಚರ-
ವಿರಿಸೆಲೆ ನೆನಪಿಲ್ಲವೇನು ಮರವಿನ ಮನವೇ ||

ಮಾಡಿದ ಗರ್‍ಭದಿ ಪಾಲನ |
ದೂಡಿದ ಕಡುಕಷ್ಟ ದುಃಖ ವೇದನೆಗಳನು ||
ನೀಡಿದ ಮೊಲೆವಾಲ್ಧಾರೆಯ |
ಗೂಢವು ನೆನಪಿಲ್ಲವೇನು ಮರವಿನ ಮನವೇ ||

ತಾರಾಗಣ ರವಿ ಚಂದ್ರಮ |
ಭೋರುಹ ಜಲ ವಾಯು ಭೋಗ ಭಾಗ್ಯವ ನಿನಗೆ ||
ಮೀರಿಹ ಸಂಪತ್ಸಾಗರ |
ತೂರಿದ ನೆನಪಿಲ್ಲವೇನು ಮರವಿನ ಮನವೇ ||

ಮನುಜನ ಮಾಡಿದ ನಿನ್ನನು |
ಘನತರ ಕೃತಿ ನಿನ್ನ ಕರದಿ ಜರುಗಲಿಯೆಂದು ||
ಘನಮಹಿಮಾತ್ಮನ ನಾಮವ |
ನೆನೆಯಲೆ ನೆನಪಿಲ್ಲವೇನು ಮರವಿನ ಮನವೆ |
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೃಂದಾವನ
Next post ಎಫ್. ಎಮ್. ದೋಸ್ತೋವಸ್ಕಿಯ – Crime and Punishment

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…