ಹರಕು ಅಂಗಿಯ ಮುರುಕು ಮನೆಯ
ಕೊಟ್ಟೆನೆಂದರೆ ದಾನವೆ
ಹಳೆಯ ರೋಗದ ಕೊಳೆಯ ದೇಹವ
ಬಿಟ್ಟೆನೆಂದರೆ ತ್ಯಾಗವೆ
ಅಲ್ಪ ಕಾಲದ ಆಸೆಗಾಗಿ
ಕ್ಷಣಿಕ ತ್ಯಾಗವು ಯೋಗ್ಯವೆ
ದೇಹದಾಸೆಗೆ ಎಳೆತ ಸೆಳೆತಕೆ
ಜಾರಿಬಿದ್ದರೆ ಜ್ಞಾನವೆ
ಮಹಾದಾನಿ ಮಹಾಯೋಗಿ
ಮಹಾತ್ಯಾಗಿ ಎನ್ನುವೆ
ನಿನಗೆ ನೀನೆ ಮೋಸ ಗೈದು
ಆತ್ಮ ವಂಚನೆ ಮಾಡುವೆ
ತ್ಯಾಗವೆಂಬಾ ಶಬ್ದ ಕೂಡಾ
ತ್ಯಾಗ ಮಾಡಲು ಬಲ್ಲೆಯಾ
ಶಿವನ ಸೊತ್ತನು ಶಿವನಿಗಿತ್ತು
ಕೈಯ ತೊಳೆಯಲು ಬಲ್ಲೆಯಾ
*****