ಸಮಯ ಸಾಕಾಗುವುದಿಲ್ಲ
ಎನ್ನುವುದೊಂದು ನೆಪ ಅಷ್ಟೇನೇ|
ತನ್ನೆಲ್ಲಾ ಇಷ್ಟಾರ್ಥಳಿಗಾಗಿ
ಸಮಯ ಸರಿಹೊಂದಿಸಿಕೊಳ್ಳುವ ನಾವು|
ಬೇರೆಲ್ಲಾದರಲ್ಲಿ ಮುಂದು
ಬೇಡವೆನಿಸಿರುವುದಕೆ ಈ ಸೋಗು||
ದೇವಸ್ಥಾನದ ಮಹಾಮಂಗಳಾರತಿ
ಸಮಯಕ್ಕೆ ಸರಿಯಾಗಿ ಹೋಗಲು
ಸಮಯ ಸಾಕಾಗದು|
ಆದರೆ ಸಿನೆಮಾಕ್ಕೆ ಹೋಗಲು
ಎನ್ನೆಲ್ಲಾ ತಯಾರಿ ನಡೆಸಿ
ಅರ್ಧಗಂಟೆ ಮುಂಚೆನೇ ಹಾಜರು|
ವಿಮಾನ ಪ್ರಯಾಣಕ್ಕೆಂದು
ಹೊರಟರೆ ಎರಡು ಗಂಟೆ ಮೊದಲು|
ಯಾರದಾದರು ಮದುವೆಗೆ
ಹೋಗಬೇಕೆಂದರೆ ಅರ್ಧ ದಿನ ಮೊದಲು
ಮಧುಮಗನ ನಾವೇ ಹೋಗಿ ತಯಾರಿ ಮಾಡಲು||
ಮಕ್ಕಳಿಗೆ ಓದಿಕೋ ಎಂದರೆ
ಕೈಕಾಲು ನೋವು, ಹೊಟ್ಟೆ ಹಸಿವು
ಸಮಯವು ತುಂಬಾ ಕಡಿಮೆ|
ಅದೇ ಆಟಆಡು ಎಂದರೆ ಸಾಕು
ಸಮಯದ ಪರಿವೇ ಇರುವುದಿಲ್ಲ|
ಬೇರೆಯವರದೇನಾದರು ಪುಕ್ಕಟೆ
ಸಾಲ ಪಡೆದರೆ ಹಿಂದಿರುಗಿಸಲು ಬೇಜಾರು
ನಿನ್ನದೇನಾದರೂ ಇತರರಿಗೆ ಸಾಲ
ನೀಡಿದರೆ ಆವರನು ಪದೇಪದೇ ಪೀಡಿಸುವುದು||
ವಠಾರದವರ ತಿಥಿ ಊಟಕೆ
ನಾವೇ ಮೊದಲು
ಭಕ್ಷ ಭೋಜನದ ರುಚಿ ನೋಡಲು|
ಚುನಾವಣೆ ಬಂತೆಂದರೆ ತಾನೇ ಮೊದಲು
ರಾಜಕಾರಣಿಗಳ ಕೈ ಕುಲುಕಲು|
ಕ್ರಿಕೇಟ್ ಇರುವದಿನ ಕೆಲಸಕೆ
ರಜಾ ಬೀಳುತ್ತೆ ಮ್ಯಾಚ್ ನೋಡಲು||
ಹೆಂಗಳೆಯರಿಗಂತೂ ಸಮಯ
ಸಾಕಾಗುವುದಿಲ್ಲ, ಎಲ್ಲಾ
ಧಾರಾವಾಹಿಗಳ ನೋಡಲು|
ರಸ್ತೆ ಅಪಘಾತವಾದರೂ ಅಲ್ಲಿಯೂ ಮೊದಲು
ಊರಲ್ಲೇನಾದರು ಅವಘಡ
ಸಂಭವಿಸಿದರೂ ತಾನೇ ಮೊದಮೊದಲು|
ಬಿಟ್ಟಿ ಯಾವುದಾದರೂ ಸರಿ, ಅದಕೆಲ್ಲಾ
ಅಂಜಿಕೆ ಮುಜುಗರವೇನಿಲ್ಲ
ಎಲ್ಲದಕೂ ಮೊದಮೊದಲು||
*****