ಎಂಥ ಚಂದದ
ಬಳ್ಳಿ ಬೆಳೆದಿಹುದಿಲ್ಲಿ
ಮೊಗ್ಗರಳಿ ಕನ್ನಡ
ಕಂಪು ಸೂಸುತಿಹುದಿಲ್ಲಿ
ತೊದಲು ನುಡಿಯಲಿ
ಪ್ರೀತಿಯೆಲ್ಲೆ ಮೀರಿಹುದಿಲ್ಲಿ
ಅವ್ವ ಅಪ್ಪ ಎಂದ್ಹೇಳಲು ಬಿಡದೆ
ಮಮ್ಮಿ ಡ್ಯಾಡಿ ಗೋ ಕಮ್ ಕಲಿಸಿ
ಚಿಗುರಿನ ಗೋಣ ಮುರಿವವರಿಲ್ಲಿ
ನಾಡು ನುಡಿಯ ಮೊಗ್ಗು
ಅರಳುವುದೆಂತು ಬಳ್ಳಿಯಲಿ
ವಿದ್ಯೆ ಕಲೆ ಸಂಸ್ಕೃತಿಯಲಿ
ಮೆರೆದಿಹ ನಾಡು
ಕನ್ನಡದ ಮೊಗ್ಗಿನ ಸೌಂದರ್ಯ
ಕನ್ನಡಿಗರಾಂತರ್‍ಯದಲ್ಲಿಹುದು
ಮನಕೊನರಿ ಸೆಟೆದು ನಿಂತರೆ
ಕನ್ನಡದ ಡಮರು ಮೊಳಗುವುದು
ಮಲ್ಲಿಗೀ ಮೊಗ್ಗುಗಳು
ಕನ್ನಡ ತಾಯ್ಗೊರಳ ಸರದಲಿ ಸಲುವವು
*****
೧-೯-೨೦೦೯ ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ಪ್ರಕಟ
Related Post
ಸಣ್ಣ ಕತೆ
-
ದಾರಿ ಯಾವುದಯ್ಯಾ?
ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…
-
ಹುಟ್ಟು
ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…
-
ಉಪ್ಪು
ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…
-
ರಾಧೆಯ ಸ್ವಗತ
ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…
-
ವಿಷಚಕ್ರ
"ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…