Daniel Defoe ನೈತಿಕತೆಯ ದ್ವಂದ್ವ ವಿಚಾರಗಳು – Moll Flanders

Daniel Defoe ನೈತಿಕತೆಯ ದ್ವಂದ್ವ ವಿಚಾರಗಳು – Moll Flanders

ಆಕೆ Moll. Colchester ನ ಶ್ರೀಮಂತ ಕುಲಾಂಗನೆಯೋರ್ವಳ ಮನೆಯಲ್ಲಿ ಹೆಣ್ಣು ಕೆಲಸದಾಕೆ. ಅತ್ಯಂತ ಆಕರ್ಷಕ, ಶೀಘ್ರಗೃಹಿಕೆಯ ಸೂಕ್ಷ್ಮ ಮನಸ್ಸಿನ ಮೋಲ್ ಆ ಕುಲೀನ ಕುಟುಂಬದ ಮೂವರು ಹೆಣ್ಣುಮಕ್ಕಳಿಗಿಂತ ಬುದ್ದಿವಂತೆ. ಆಕೆಗೆ ಒಂದನ್ನು ಬಿಟ್ಟು ಉಳಿದೆಲ್ಲ ಸೌಭಾಗ್ಯಗಳಿವೆ. ಅದೇ ಆ ಕಾಲದ ಅತೀ ಅಗತ್ಯವಾದ ಶ್ರೀಮಂತಿಕೆಯ ಅಂತಸ್ತು ಎಂಬ ಹಣೆಪಟ್ಟಿಯೊಂದನ್ನು ಹೊರತುಪಡಿಸಿ. ಹಾಗಾಗೇ ಆಕೆಯ ಬದುಕಿನ ಬಹುದೊಡ್ಡ ಮಹಾತ್ವಾಕಾಂಕ್ಷೆ ಎಂದರೆ ತಾನೊಬ್ಬ ಕುಲೀನ ಸ್ತ್ರೀಯಾಗಿ ಬಾಳಬೇಕೆಂಬುದು. ಅದಕ್ಕಾಗೆ ಆಕೆ ಬದುಕಿನುದ್ದಕ್ಕೂ ಹಲವು ಪಾತ್ರಗಳ ಮುಖವಾಡಗಳ ಧರಿಸುತ್ತಲೇ ಹೋಗುತ್ತಾಳೆ. ಆಕೆಯ ಸೌಂದರ್ಯಕ್ಕೆ ಮನಸೋತ ಆ ಮನೆಯ ಇಬ್ಬರೂ ಸಹೋದರರು ಆಕೆಯನ್ನು ಬಯಸುತ್ತಾರೆ. ಕಿರಿಯವನಾದ ರೋಬಿನ್ [ರಾಬರ್ಟ] ಆಕೆಯನ್ನು ನಿರ್ಮಲವಾಗಿ ಪ್ರೀತಿಸಿದರೆ ಆತನ ಅಣ್ಣ ಆಕೆಯ ದೇಹ ಸಿರಿಯನ್ನು ಪ್ರೀತಿಸಿ ಆಕರ್ಷಿಸುತ್ತಾನೆ. ಮೊಲ್ ಕೂಡ ಆತನನ್ನೆ ಪ್ರೀತಿಸುತ್ತಾಳೆ. ಆಕೆಯೊಂದಿಗೆ ವಿವಾಹಪೂರ್ವ ಸಂಬಂಧದಲ್ಲಿ ಬೆಸೆದುಕೊಳ್ಳುವ ಆತ ವಿಷಯಲಂಪಟನಾಗಿದ್ದು ಕೆಲವೇ ಸಮಯದಲ್ಲಿ ಆಕೆಯಲ್ಲಿ ಅನಾಸಕ್ತನಾಗಿ ಆಕೆಗೆ ಒಂದಿಷ್ಟು ಹಣವನ್ನು ನೀಡಿ ಆಕೆ ತನ್ನ ತಮ್ಮನನ್ನು ವಿವಾಹವಾಗುವಂತೆ ಮಾಡುತ್ತಾನೆ. ಅದನ್ನಾಕೆ ಒಪ್ಪಿಕೊಳ್ಳುತ್ತಾಳೆ. ಆದರೆ ದುರದೃಷ್ಟಾವಶಾತ್ ಐದೇ ವರ್ಷಗಳಲ್ಲಿ ಆಕೆಗೆ ಸುಂದರ ಜೀವನ ನೀಡಿದ ಸಭ್ಯನಾದ ಸದ್ಗುಣಿಯಾದ ಪತಿ ರೋಬಿನ್ ಮೃತನಾಗುತ್ತಲೂ ಆಕೆಯ ಬದುಕು ಮತ್ತೆ ದಾರಿ ತಪ್ಪುತ್ತದೆ. ತನ್ನೆರಡು ಮಕ್ಕಳನ್ನು ರೊಬಿನ್‌ನ ಹೆತ್ತವರ ಕೈಗೊಪ್ಪಿಸಿ ಆಕೆ ಕುಲೀನ ಹೆಣ್ಣಿನ ಅಂತಸ್ತು ಪಡೆಯಲು ಮದುವೆ ಪ್ರೇಮವೆಂಬ ಬಲೆಗಳಿಗೆ ತೆರೆದುಕೊಳ್ಳುತ್ತ ಹೋಗುವುದು ವಿಪರ್ಯಾಸ.

ಮೋಲ್ ಹಲವು ಬಾರಿ ವಿವಾಹವಾಗುತ್ತಾಳೆ. ಹಲವು ಗಂಡುಗಳೊಂದಿಗೆ ಸಂಬಂಧ ಹೊಂದುತ್ತಾಳೆ. ಕೊನೆಯಲ್ಲಿ ದರೋಡೆಗಿಳಿಯುತ್ತಾಳೆ. ಕಳ್ಳಿಯಾಗುತ್ತಾಳೆ. ಇವೆಲ್ಲವನ್ನೂ ತನ್ನ ಸಾಮಾಜಿಕ ಸ್ಥಾನಮಾನ ಗಳಿಸಿಕೊಳ್ಳುವ ನೆಲೆಯಲ್ಲಿಯೇ ಮುಂದುವರೆಸುವ ಆಕೆ ದುರ್ಮಾರ್ಗಿಯಾಗಿ ವಿವಿಧ ಮುಖವಾಡಗಳ ಮರೆಯಲ್ಲಿ ಗಂಡಿನ ವೇಷತೊಟ್ಟು, ವಿಧವೆಯ ಪೋಷಾಕಿನಲ್ಲಿ ಬಿಕ್ಷುಕಿಯಾಗಿ ವೇಷಮರೆಸಿಕೊಂಡು ಬದುಕುತ್ತಾ ಕೊನೆಯಲ್ಲಿ ಶ್ರೀಮಂತ ಸ್ತ್ರೀಯಾಗಿ ಸ್ಥಿರವಾಗಿ ನೆಲೆಯೂರುತ್ತಾಳೆ. ಅದೃಷ್ಟ ದುರಾದೃಷ್ಟಗಳ ಕೈಯಲ್ಲಿ ಆಕೆಯ ಬದುಕು ಚೆಂಡಿನಂತೆ ಪುಟಿಯುತ್ತ ಸಾಗುತ್ತದೆ. ಬಾಲ್ಯದ ಹೊರತಾಗಿ ಆಕೆ ಐದು ಸಲ ಪತ್ನಿಯಾಗಿ, ಹನ್ನೆರಡು ವರ್ಷಗಳ ಕಾಲ ವೈಶ್ಯೆಯಾಗಿ, ಎಂಟು ವರ್ಷಗಳ ಕಾಲ ಕಳ್ಳಿಯಾಗಿ ಮಹಾಪಾತಕಿಯಾಗಿ ಜೀವಿಸಿ ಕೊನೆಯಲ್ಲಿ ಸಂತೃಪ್ತ ಜೀವನ ನಡೆಸಿದರೂ ಹಿಂದಿನ ಪಾಪಕರ್ಮಗಳ ಬಗ್ಗೆ ಪಶ್ಚಾತ್ತಾಪದಿಂದ ಬೆಂದು ನರಳುತ್ತಾ ಕೊನೆ ಕಾಣುತ್ತಾಳೆ.

ಪತಿ ರೊಬಿನ್ ಮರಣದ ನಂತರ ಮತ್ತೆ ಪ್ರೇಮದ ಬಲೆಯಲ್ಲಿ ಬೀಳದೆ ಮದುವೆಯಾಗಿ ಗಟ್ಟಿಯಾಗಿ ಬದುಕಿನಲ್ಲಿ ನೆಲೆಯೂರಬೇಕೆಂದು ಬಯಸಿದ ಮೋಲ್ ಕುಲೀನ ವ್ಯಾಪಾರಿಯೊಬ್ಬನನ್ನು ವಿವಾಹವಾಗುತ್ತಾಳೆ. ಆದರೆ ಆತ ಆಕೆಯ ಬಳಿಯಿದ್ದ ಹಣವನ್ನು ವ್ಯಯಿಸಿ, ತನ್ನ ಅತಿಯಾದ ಸಾಲದ ಕಾರಣ ಸೆರಮನೆ ಸೇರುತ್ತಾನೆ. ಮುಂದೆ ತನ್ನ ಮಲ ಸಹೋದರ Virginia planter ನನ್ನೆ ಮೂರನೇ ಪತಿಯಾಗಿ ಹೊಂದುವ ಆಕೆಗೆ ಅದು ತನ್ನ ತಾಯಿಯಿಂದ ತಿಳಿಯುತ್ತಲೇ ಅವನಿಂದಲೂ ವಿಮುಖಳಾಗುತ್ತಾಳೆ. ಒಮ್ಮೆ ಗಂಡಿನಿಂದ ಮೋಸಕ್ಕೊಳಗಾಗುವ ಹೆಣ್ಣು ಪುನಃ ತಾನಾಗಿಯೇ ಆ ಖಯಾಲಿಗೆ ಬೀಳುವ ಸಾಂಕೇತಿಕ ಪಾತ್ರವಾಗಿ ಮೋಲ್ ಇಲ್ಲಿ ಕಂಡು ಬರುತ್ತಾಳೆ.

ಇದು ಆ ಕಾಲದ ಅನಾಥರ ಬಡ ಜನರ ಬದುಕಿನ ಅಸ್ತವ್ಯಸ್ತತೆ ತೆರೆದಿಡುತ್ತದೆ. ಅದಲ್ಲದೇ ಮುಂದಿನ ಎರಡು ವಿವಾಹಗಳು ಆಕೆಗೆ ಸಧೃಢ ಬೆಂಬಲ ನೀಡುವುದಿಲ್ಲ. ಹೀಗಾಗಿ ಆಕೆ ತನ್ನ ೪೮ನೆ ವಯಸ್ಸಿಗೆ ಕಳ್ಳತನದಂತಹ ಕ್ಷುಲಕ ಕೆಲಸಕ್ಕಿಳಿಯುತ್ತಾಳೆ. ವೈಶ್ಯೆಯಾಗುತ್ತಾಳೆ. ಈ ಸಂಗತಿಗಳು ಹದಿನೇಳನೇ ಶತಮಾನದ ಇಂಗ್ಲೆಂಡಿನ ಬದುಕು ಅಪರಾಧಿಗಳನ್ನು ಹೇಗೆ ಸೃಜಿಸುತ್ತಿತ್ತೆಂಬುದನ್ನು ವಿಷದಿಕರೀಸುತ್ತದೆ.

ಸಮಾಜದಲ್ಲಿ ಹೆಣ್ಣಿನ ಪರಿಸ್ಥಿತಿ ಗಂಡಿನ ಸಾಮಾಜಿಕ ಸ್ಥಿತಿಯೊಂದಿಗೆ ಹೋಲಿಸಿದಾಗ ಆತ ಪರಿಸ್ಥಿತಿಯ ನಿಭಾಯಿಸಬಲ್ಲ. ಆದರೆ ಆಕೆಗೆ ಹಾಗಲ್ಲ. ಆಕೆಯ ನಕಾರಾತ್ಮಕ ಉತ್ತರಗಳು ಆಕೆಗೆ ಜೀವನದುದ್ದಕ್ಕೂ ಕಳೆದುಕೊಂಡ ಅವಕಾಶದ ಬಗ್ಗೆ ಚಿಂತಿಸುವಂತೆ ಮಾಡಬಹುದು. ಮೋಲ್ ಇಲ್ಲಿ ಕೂಡಾ ಅಂತಹ ಸಂದಿಗ್ಧತೆಯಲ್ಲಿಯೇ ರೋಬಿನ್‌ನ ವಿವಾಹವಾಗುತ್ತಾಳೆ. ಸಾಮಾನ್ಯ ಓದುಗನ ದೃಷ್ಟಿಯಲ್ಲಿ ಆಕೆ ನಿಕೃಷ್ಟವಾಗಿ ಕಾಣಬಹುದು. ಆಕೆಯಲ್ಲಿ ರಕ್ತಗತವಾದ ಅಪರಾಧಿ ಮನೋಭಾವ ಗುರುತಿಸಬಹುದು. ಮದುವೆಗೂ ಮುನ್ನ ಆಕೆ Colchester ಸಹೋದರನೊಂದಿಗಿನ ಅನೈತಿಕ ಸಂಬಂಧ, ಪುನಃ ಆತನ ಸಹೋದರನನ್ನೆ ವಿವಾಹವಾಗುವ ಸಂದರ್ಭ, ಪುನಃ ಪುನಃ ವಿವಾಹ ಬಂಧನದಲ್ಲಿ ತಾನಾಗಿಯೇ ಬೆಸೆದುಕೊಳ್ಳುವುದು ಹೀಗೆ ಆಕೆ ಅಪರಾಧಗಳ ಸಂಜ್ಞೆಯಾಗಿ ಕಾಣಬಹುದು.

ಆದರೆ ಬಾಲ್ಯದಲ್ಲಿಯೇ ಆಕೆಯ ಮನಸ್ಸನ್ನಾಕ್ರಮಿಸಿದ ಕುಲೀನ ಹೆಣ್ಣಿನ ಚಿತ್ರಣ, ಸಮಾಜದಲ್ಲಿ ಆ ಹೆಣ್ಣಿಗಿರುವ ಘನತೆ ಗೌರವದ ಸಂಗತಿಗಳು ಆಕೆಯ ಜೀವನದ ಮಹತ್ವಾಕಾಂಕ್ಷೆಗಳಾದವು. ಕೆಲಸದಾಳು ಆಗಿ ಬದುಕುವ ಜೀವನ ಆಕೆಯ ಆದ್ಯತೆಯಲ್ಲ. ತಾನೊಬ್ಬ ಸ್ವತಂತ್ರ ವ್ಯಕ್ತಿತ್ವ ಹೊಂದುವ ಆಸೆ ಆಕೆಯದು. ಈ ಚಿತ್ರಣವನ್ನು Defoe ಚೆನ್ನಾಗಿಯೇ ಚಿತ್ರಿಸುತ್ತಾನೆ. Colchester ಗೆ ಜಿಪ್ಸಿಗಳ ಗುಂಪಿನೊಂದಿಗೆ ಬಂದಿಳಿದ ಮೂರು ವರ್ಷಪ್ರಾಯದ ಮೋಲ್‌ಗೆ ಅವರೊಂದಿಗೆ ಹೋಗಲು ಮನಸ್ಸಿಲ್ಲ. ಹಾಗಾಗಿ ಆಕೆಯನ್ನು ನರ್ಸ ಒಬ್ಬಳು ದತ್ತು ಪಡೆಯುತ್ತಾಳೆ. ಎಂಟು ವರ್ಷದ ಮೋಲ್‌ಗೆ ಮ್ಯಾಜಿಸ್ಟ್ರೇಟ್ ಒಬ್ಬರ ಮನೆಗೆಲಸಕ್ಕೆ ಹೋಗಲು ಹೇಳಿದಾಗಲೂ ಆಕೆ ಒಪ್ಪುವುದಿಲ್ಲ. ಇದಾಕೆಯ ಅಂತರ್ಗತ ಇರಾದೆಯ ಸ್ಪಷ್ಟಪಡಿಸುತ್ತದೆ. ಆ ಕಾಲದ ವಿವಾಹಗಳು ಮುಖ್ಯವಾಗಿ ಆರ್ಥಿಕ ಸ್ಥಿತಿಯನ್ನು ಪರಿಗಣಿಸುತ್ತಿದ್ದವು. ಶ್ರೀಮಂತ ಹೆಣ್ಣುಗಳನ್ನು ವಿವಾಹವಾಗ ಬಯಸುತ್ತಿದ್ದ ಪುರುಷ ಸಮುದಾಯವೇ ಅಧಿಕವಾಗಿತ್ತು. ಆ ಹಣದಲ್ಲಿ ಮೆರೆವ ಸಂಕಲ್ಪ ಹೊಂದಿದ ಪುರುಷರೇ ಅಧಿಕವಾಗಿದ್ದರು.

Moll Flanders ಡೇನಿಯಲ್ ಡೆಫೋ ಬರೆದ Picaresque ಮಾದರಿಯ ಕಾದಂಬರಿ. ಪಿಕಾರೋ ಎಂದರೆ Rogueಎಂದರ್ಥ. ಪಿಕಾರೋ ಇದೊಂದು ಸ್ಪಾನಿಷ್ ಪದ. ಈ ಕಾದಂಬರಿಗಳ ನಾಯಕ ಅಥವಾ ನಾಯಕಿ ವಿಶಿಷ್ಟ ವಿಛಿನ್ನ ವ್ಯಕ್ತಿತ್ವದ ಪಾತ್ರಗಳು. ಒಳ್ಳೆಯ ಗುಣವುಳ್ಳ ಆದರೆ ಸಾಮಾಜಿಕ ಜೀವನದಲ್ಲಿ ಯಾವುದೇ ಒಂದು ಪಾತ್ರದಲ್ಲಿ ಸ್ಥಾನದಲ್ಲಿ ತಮ್ಮನ್ನು ಗುರುತಿಸಿಕೊಳ್ಳಲಾಗದ ಅತಂತ್ರ ಜೀವನ ಮತ್ತು ಮನಸ್ಥಿತಿ ಇರುವುದು ಈ ಪಾತ್ರಗಳ ವೈಶಿಷ್ಟ್ಯ. ವೈಭಿಚಾರಿ, ಸನ್ಯಾಸಿ, ಮಗು, ದರೋಡೆಕೋರ, ಆಳು ಹೀಗೆ ಇಂತಹ ಯಾವುದಾದರೂ ಒಂದು ಪಾತ್ರವಾಗಿ ಈ ಕಾದಂಬರಿಗಳ ಮುಖ್ಯಪಾತ್ರವಾಗಿರುವುದು ಇಲ್ಲಿಯ ವಿಶೇಷತೆ. ಈ ಪಾತ್ರಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸದಾ ಅಲೆಮಾರಿಗಳಂತೆ ಬದಲಾಯಿಸುತ್ತಲೇ ಇರುವುದು ಇನ್ನೊಂದು ಸಂಗತಿ.

೧೬೬೦ರಲ್ಲಿ ಲಂಡನನಲ್ಲಿ ಜನಿಸಿದ Daniel Defoe ಭಿನ್ನ ಮತಾವಲಂಬಿ. ಆ ಮತದ ಕ್ಲೆರ್ಜಿಮ್ಯಾನ್ ಆಗಬೇಕಾದ ಶಿಕ್ಷಣವನ್ನು ಪಡೆದಿದ್ದ. ತನ್ನ ಪ್ರಾಯದ ದಿನಗಳಲ್ಲಿ ರಾಜಕೀಯದತ್ತ ಆಕರ್ಷಿತನಾದ. ತನ್ನ ೩೨ನೇ ವಯಸ್ಸಿಗೆ ಸಂಪೂರ್ಣ ದಿವಾಳಿಯಾದ. ಆದರೆ ತದನಂತರ ಕ್ವೀನ್ ಆನ್‌ಳ ಸಂಪರ್ಕದಿಂದ ಪುನಃ ಸ್ಥಿರಗೊಂಡ. ಅನೇಕ ಪ್ರಮುಖ ಕೃತಿಗಳನ್ನು ನೀಡಿದ ಈತ ೧೭೩೧ರಂದು ಮರಣಿಸಿದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂಬನೀ ದಯಮಾಡೆ
Next post ಸಮರ

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…