ಬೆಳಗಾವಿಯ ಹವ್ಯಾಸಿ ಕಲಾಪ್ರೇಮಿಗಳು ಸೇರಿ ರಂಗ ಕಲೆಯ ಹವ್ಯಾಸ ಸುಸಂಸ್ಕೃತ ಸಮಾಜವನ್ನು ನಿರ್ಮಿಸಲು ನಾಟಕ ಕಲೆ ಬಳಕೆಯಾಗಬೇಕೆನ್ನುವ ಹಂಬಲದೊಂದಿಗೆ ಸಂಸ್ಕೃತಿ ಕಲೆಗಳ ಬಗ್ಗೆ ಅಭಿರುಚಿ ಮೂಡಿಸುವ ಮಹಾ ಉದ್ದೇಶದೊಂದಿಗೆ ನೂತನವಾಗಿ ಹುಟ್ಟಿದದೆ ‘ಕಲಾರಂಗ’.
ತನ್ನ ಹುಟ್ಟಿನೊಂದಿಗೆ (ಬೆಂಗಳೂರಿನ) ಇತ್ತೀಚಿಗಷ್ಟೆ ತನ್ನ ವಿಶಿಷ್ಟ ಅಭಿನಯ ಉತ್ತಮ ನಾಟಕಗಳ ರಚನಾ ಕಲೆಯೊಂದಿಗೆ ಪ್ರೇಕ್ಷಕರ ಮನಗೆಲ್ಲುತ್ತಿರುವ ಚಿತ್ತಾರ ತಂಡದಿಂದ ಪ್ರಪ್ರಥಮವಾಗಿ ಸ್ಥಳೀಯ ಗೋಗಟೆ ರಂಗಮಂದಿರದಲ್ಲಿ ಮಾಚ್ ೨೫ರಂದು ಬೆಳಗಾವಿ ಪ್ರಬುದ್ಧ ಪ್ರೇಕ್ಷಕರ ಸಮ್ಮುಖದಲ್ಲಿ ‘ಸಂಜೆ ಹಾಡು’ ಹಾಗೂ ಮೂಲ ಮರಾಠಿಯ ‘ಬದಾಮ್ ರಾಣಿ ಚೌಪಟ್ ಗುಲಾಮ್’ ಎಂಬ ಎರಡು ನಾಟಕಗಳ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿದ್ದ ಚಾರಿಟಿ ಕಮೀಷನರ್, ಶ್ರೀ ಎಂ.ಜಿ. ರಾಜು “ನೂತನ ಹವ್ಯಾಸಿ ರಂಗಕಲೆಯ ಮತ್ತು ಕಲಾರಂಗಕ್ಕೆ ಪ್ರೋತ್ಸಾಹಿಸಲು” ಕೋರಿದರು. ಅಧ್ಯಕ್ಷರಾಗಿ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಜಿ.ವಿ. ಗಾಂವಕರ, ಮಾತನಾಡಿ “ಸಮಾಜದಲ್ಲಿನ ಅನಿಷ್ಟ ಪದ್ಧತಿಗಳನ್ನು ತೊಲಗಿಸುವ ದಿಶೆಯಲ್ಲಿ ಕಲಾರಂಗ ಯತ್ನಿಸಲಿ” ಎಂದು ಆಶಿಸಿದರು. ಅತಿಥಿಗಳಾಗಿ ಬಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಳಗಾವಿ ಶಾಖಾಧ್ಯಕ್ಷರಾದ ಶ್ರೀ ಬಿ.ಎಸ್. ಪಾಟೀಲರು ‘ಜೀವನವೇ ಒಂದು ನಾಟಕ ರಂಗವೆಂದು’ ಕಲಾರಂಗಕ್ಕೆ ಶುಭ ಕೋರಿದರು.
’ಸಂಜೆ ಹಾಡು’-ಈ ನಾಟಕ ರಚಿಸಿ ನಿರ್ದೇಶಿಸಿದ ಮುಖ್ಯ ಪಾತ್ರಧಾರಿ ರಾಜೇಂದ್ರ ಕಾರಂತರು, ಬರೀ ನಾ ನಟರುಳ್ಳ ನಾಟಕವಾದರೂ ಸರಳ ಕಥಾವಸ್ತು, ಸಹಜ ಅಭಿನಯ, ನವಿರು ಹಾಸ್ಯಗಳೊಂದಿಗೆ, ವಿಚಾರಗಳನ್ನು ಮಂಡಿಸುತ್ತ, ಯಾವ ಗೊಂದಲವಿಲ್ಲದೆ ಉತ್ತಮ ಕಥಾ ರಚನೆಯ ‘ಸಂಜೆ ಹಾಡು’ ಪಕ್ವ ಅಭಿನಯದಿಂದ ಕೂಡಿದರೂ ಇಂದಿನ ಟಿ. ವಿ. ಡಿಸ್ಕೋ ಮರಸುತ್ತುವ ದೃಶ್ಯಗಳ ಆರಾಧಿಸುವ ಸೀಮಿತ ನವಯುವ ಪ್ರೇಕ್ಷಕ ವೃಂದದ ನಿಟ್ಟುಸಿರು. ಹೆಚ್ಚಿನ ಕಲಾಪ್ರೇಮಿಗಳ ಮನ ತಲುಪಿ ಒಟ್ಟಾರೆಯಾಗಿ ಯಶಸ್ವಿ ಪ್ರದರ್ಶನವಾಗಿತ್ತು.
“ಬಾದಾಮ್ ರಾಣಿ ಚೌಪಟ್ ಗುಲಾಮ್” ಮೂಲ ಮರಾಠಿ ನಾಟಕವಾದರು ಭಾವಾಭಿನಯಕ್ಕೆ ಹೆಸರುವಾಸಿಯಾಗಿ ೧೯೮೬ “ಯುವರಂಗ” ರಾಜ್ಯಮಟ್ಟದ ಶ್ರೇಷ್ಠ ನಟಿಪ್ರಶಸ್ತಿ ಗಳಿಸಿದ ರಾಜೇಂದ್ರ ಕಾರಂತರ ದಕ್ಷ ನಿರ್‍ದೇಶನದಲ್ಲಿ ಜೊತೆಗೆ ಅವರ ಅಭಿನಯದಲ್ಲಿ ಮೂಡಿ ಬಂದ ನಾಟಕ ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿ ಮಾಡಿ, ಹಾಸ್ಯದ ಹೊನಲಲ್ಲಿ ತೇಲಾಡಿಸಿದರೆ; ಅಷ್ಟೇ ಚೂಟಿ ಅಭಿನಯ ನಾಟಕದುದ್ದಕ್ಕೂ ಪ್ರೇಕ್ಷಕರನ್ನು ಸೆರೆ ಹಿಡಿಯುವ ಚೌಪಟ್ ಗುಲಾಮನಾಗಿ ಎಚ್.ಸಿ, ಸೋಮಶೇಖರ್ ನೆರೆದ ರಂಗಸಾಕ್ತರ ಮೆಚ್ಚುಗೆ ಪಾತ್ರರಾದರು. ಅಷ್ಟೇ ಮುಗ್ಧ ನೈಜ ಕಲಾಭಿನಯ ಪ್ರದರ್ಶಿಸಿದ ಉದಯೋನ್ಮುಖ ಕಲಾವಿದ ಪ್ರಕಾಶ ಗುಂಡುರಾವ್ ಪಾತ್ರದಲ್ಲಿ ಸೇರಿದ ಪ್ರೇಕ್ಷಕ ವೃಂದಕ್ಕೆ ಹಾಸ್ಯದ ಔತಣ ನೀಡಿದರು.
ಕಲಾರಂಗ ಪ್ರದರ್ಶಿಸಿದ, ಎರಡೂ ನಾಟಕಗಳನ್ನು ನಿರ್ದೇಶಿಸಿದ ರಾಜೇಂದ್ರ ಕಾರಂತ (ಚಿತ್ತಾರತಂಡ) ಒಬ್ಬ ಉದಯೋನ್ಮುಖ ನಾಟಕ ರಚನಾ ಕೌಶಲದೊಂದಿಗೆ ಸಮರ್ಥ ನಿರ್ದೇಶಕರೆನ್ನುವುದನ್ನು ಸಾಬೀತು ಗೊಳಿಸಿದರು.
ನಾಲ್ಕ ಪಾತ್ರಗಳಿಂದ ಪ್ರೇಕ್ಷಕನ ಹೃದಯ ತಟ್ಟಿ, ಪ್ರೀತಿ ಪ್ರೇಮ ಸಂಬಂಧದ ಮೌಲ್ಯಗಳ ಪರಿಣಾಮ, ಇಳಿವಯಸ್ಸಿನ ಬದುಕಿನ ಎಲ್ಲಾ ಹಂತಗಳನ್ನು ಅನುಭವಿಸಿ, ದಾಟಿ ಇನ್ನು ವಂಶದ ಕುಡಿ ಪ್ರೀತಿ ಮಗನಿಂದ ಬದುಕಲಿ ಸಂತೋಷ, ಉಲ್ಲಾಸ ಕಾಣಲು ಆಶಿಸಿ, ಬಯಸಿ ಅದರಿಂದ ವಂಚಿತನಾದ ಸದಾಶಿವರಾವ್ ಮನೆಯ ಯಜಮಾನಾಗಿ ರಾಜೇಂದ್ರ ಕಾರಂತ ತಮ್ಮ ಪ್ರೌಢ ಅಭಿನಯದಲ್ಲಿ ವಾತ್ಸಲ್ಯ ಪ್ರೀತಿಗಳಿಂದ ವಂಚಿತನಾಗಿ ಬಳಲುತ್ತಿದ್ದ. ಸದಾಶಿವರಾಮ ಮನೆಗೆ ಪೇಯಿಂಗ್ ಗೆಸ್ಟ್ ಆಗಿ ಬಂದ ತನ್ನ ಮಗನಾದ ಚಂದ್ರುವಿನ ವಯಸ್ಸಿನ ಅವನ ಇನ್ನೊಂದು ರೂಪವಾಗಿದ್ದ ಸುಚಯಿಂದ್ರ ತೀರ್ಥನೆಂಬ ಆದರ್ಶ ಯುವಕ ಮನೆ ಸೇರಿದಾಗ, ಅದರಡಿ ಸ್ವೀಕರಿಸಿದ ಸದಾಶಿವರಾಯನಿಗೆ ಮಗನ ಪ್ರೀತಿ ವಾತ್ಸಲ್ಯದ ಕೊರತೆಯನ್ನು ಪೇಯಿಂಗ್ ಗೆಸ್ಟ್‌ನಾಗಿ ಬಂದ ಸುಚಿಯಿಂದ್ರ ತೀರ್ಥ ದೂರವಾಗಿಸಿದ. ಇಳಿ ಬದುಕನ್ನು ಸಂತಸವಾಗಿ ಉಲ್ಲಾಸದಿ ಮೆಲುಕು ಹಾಕುತ್ತಿರುವಾಗ, ಅತಿಥಿಯಾಗಿ ಬಂದವ ಎಂದೆಂದಿಗೂ ಹೊರಗಿನವನೇ, ಅವನೆಂದೂ ಮಗನ ಸ್ಥಾನ ತುಂಬಲಾರ ಎಂದು ಸುಚಿಯಿಂದ್ರ ತೀರ್ಥ ಹೊರಟುಹೋಗುವನು. ಪ್ರೀತಿ ವಾತ್ಸಲ್ಯದಿಂದ ಮತ್ತೆ ಬರಡಾಗುವ ಬದುಕಿನ, ಇಳಿವಯಸ್ಸಿನಲ್ಲಿ ಮನಕ್ಲೇಶದಲ್ಲಿ ತಂದೆ ಮಗನ ಸಂಬಂಧ ಪ್ರೀತಿಯ ಸೆಲೆಯ ಅಭಾವದಿಂದ, ಅವನ ಬಯಕೆ ಕೊರಗಲ್ಲಿ ಸಂಜೆ ಹಾಡಾಗಿ ಕೇಳುತಿಹದು.
ಸಂಜೆ ಹಾಡಲಿ ತಂದೆ ಮಗನ ಪೇಯಿಂಗ್ ಗೆಸ್ಟ್ಗಳ ಮಧ್ಯ ಅಷ್ಟೇ ನಾಟಕದ ಜೀವಾಳಾಗಿ, ಪ್ರೇಕ್ಷಕನನ್ನು ಅಡುಗೆ ಭಟ್ಟನ್ ಪಾತ್ರ ಮನ ಮಿಡಿಯುವದು.
ಸುಚಿಯಿಂದ್ರ ತೀರ್ಥನಾಗಿ, ಎಂ.ಎಸ್. ಪ್ರಸಾದ್ ಹಾಗೂ ಸದಾಶಿವರಾವನ ಮಗನಾಗಿ ಎಂ.ಎಸ್. ಪ್ರಕಾಶ, ಮತ್ತೆ ಸದಾಶಿವರಾವ್‌ನಾಗಿ ರಾಜೇಂದ್ರ ಕಾರಂತ, ಭಟ್ಟರಾಗಿ ಶ್ರೀ ಅನಂತ ಮೂರ್ತಿ ತಮ್ಮ ಅಭಿನಯದಿಂದ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದರು.
“ಬದಾಮ್ ರಾಣಿ ಚೌಪಟ್ ಗುಲಾಮ್”
ಮೂಲ ಮರಾಠಿ ಭಾಷಾಂತರ ನಾಟಕವಾದರೂ ಹಾಸ್ಯದೌತಣ ನೀಡುವದರೊಂದಿಗೆ ಇಂದಿನ ಯುವಕ, ಅಶಿಕ್ಷತೆ, ಅಜ್ಞಾನದ ಹೆಣ್ಣನ್ನು ವರಿಸಲು ಬಯಸದೇ ಸುಶಿಕ್ಷಿತ ಕಲಿತ ಜೀವನನೊಂದಿಗೆ ಸ್ಪಂದಿಸುವ ಬಾಳಸಂಗಾತಿಯನ್ನು ಬಯಸುವ ಅಭಿಪ್ರಾಯವನ್ನು ಮಂಡಿಸುತ್ತಾರೆ.
ನಾಟಕದ ಕೇಂದ್ರ ಪಾತ್ರಧಾರಿ, ಚೌಪಟ್ ಗುಲಾಮನಾಗಿ ತಮ್ಮೂರಿನ ಶ್ರೀ ಗಜಾನನರಾವ್ ಘೋರ್ಪಡೆ ರಾವ್‌ರವರ ಮನೆಗೆಲಸದಾಳು, ಸೋದರ ಮಾವ ಗುಂಡರಾವನನ್ನು ಕಾಣಲು ಬಂದು ಸೋದರ ಮಾವನ ಸಲಹೆಯಂತೆ ಗಜಾನನರಾವ್‌ನ ಮಗಳಾದ ಗಂಗೂಬಾಯಿಯನ್ನು ಮದುವೆಯಾಗುವ ಪ್ರಯತ್ನವು, ಮೊದಲ ಹಂತದಲ್ಲಿ ಗಂಗುಬಾಯಿಯು ಬೇಕಂತಲೆ ಚೌಪಟ್ ಗುಲಾಮನ ಗೇಲಿ ಮಾಡಲು ಅಶೀಕ್ಷತೆಯಂತೆ ಅಗೌರವದಿಂದ ನಡಿಸಿ, ಅವನಿಂದ ದೂರಿಸಿಕೊಂಡು ಹೋಗುವಳು.
ಕೊನೆಗೆ ಚೌಪಟ್ ಮನೋಹರ ತನ್ನ ಮಗಳನ್ನು ಮದುವೆಯಾಗಲು ತಿರಸ್ಕರಿಸಿದ ವಿಷಯ ತಿಳಿದು ಗಜಾನನರಾವ್ ಮನೆಯಾಳು ಗುಂಡರಾವ್ ಹಾಗೂ ಸೋದರಳಿಯ ಮೊಕಾಶಿಯವರನ್ನು ಕೋಪದಿ ಹಳಿಯುತ್ತ ತನ್ನ ಮಗಳು ವಿದ್ಯಾವಂತ ಪದವೀಧರೆ. ಅವಳ ಪ್ರತಿಭೆ ಕುರಿತು ಮಾತಾಡಿ ಚೌಪಟ್ ಮೋಕಾಶಿಗೆ ತೋರಿಸಲೋಸ್ಕರ ಅವರ ಎದುರಿಗೆ ತನ್ನ ಮಗಳು ಗಂಗೂಬಾಯಿಯನ್ನು ಕರೆಸಿದಾಗ, ಗುಂಡುರಾವ್ ಮನೋಹರ ಮೊಕಾಶಿಗೆ ಅವರ ಕಣ್ಣುಗಳೇ ಅವರಿಗೆ ನಂಬದಂತೆ ವೇಷಭೂಷಣ ಅಷ್ಟೆ ಅಲ್ಲದೆ ಅವಳ ಮಾತು ಸೌಂದರ್ಯ ಕಂಡು ಗರಬಡಿದಂತೆ ವಿಲಿ ವಿಲಿ ಒದ್ದಾಡುವದಂತೂ ಪ್ರೇಕ್ಷಕನ ಹೊಟ್ಟೆ ಹುಣ್ಣಾಗುವಂತೆ ನಗು ಕಡಲಲ್ಲಿ ತೇಲಿಸುವರು.
ಕೊನೆಗೆ ಚೌಪಟ್ ಮೋಕಾಶಿ ಬದಾಮ ರಾಣಿ ಗಂಗೂಬಾಯಿಗೆ ಮರಳಾಗಿ ಅವರಪ್ಪ ಗಜಾನನರಾವ್ ಘೋರ್ಪಡೆ, ಅರ್ಥಾರ್ಥ ಭಾವಿ ಮಾವನಿಗೆ ಕ್ಷಮೆಯಾಚಿಸಿ, ಬದಾಮರಾಣಿ ಗೆಲುವದರೊಂದಿಗೆ ಚೌಪಟ್ ಗುಲಾಮನಾಗುವನು.
“ಚೌಪಟ ಗುಲಾಮ ಮನೋಹರ ಮೊಕಾಶಿಯ ಪಾತ್ರಧಾರಿ ಶ್ರೀ ಎಚ್. ಸೋಮಶೇಖರ ತಮ್ಮ ಚೂಟಿ ಅಭಿನಯದಿ ನಾಟಕದುದ್ದಕ್ಕೂ ಪ್ರೇಕ್ಷಕರನ್ನು ಸೆರೆಹಿಡಿದು ಮನರಂಜಿಸಿದರು. ಸೋದರಮಾವ ಗುಂಡೆರಾವನಾಗಿ, ಶ್ರೇಷ್ಠ ಅಭಿನಯ ಪ್ರದರ್ಶಿಸಿದ ಉದಯೋನ್ಮುಖ ಕಲಾವಿದ ಎಂ.ಎಸ್. ಪ್ರಕಾಶ್ ಪ್ರೇಕ್ಷಕ ವೃಂದಕ್ಕೆ, ರಸದೌತಣ ನೀಡಿದರು. ಮನೆಗೆಲಸದವನಾದ ಗಂಗರಾವ್ ರೇವಡಿ. ಪಾತ್ರದಲ್ಲಿ ‘ಆಕಾಶವಾಣಿ’ ಕಲಾವಿದ ಶ್ರೇಷ್ಠ ಭರತನಾಟ್ಯ ಪಟು ಶ್ರೀ ಷಡಕ್ಷರಿ ಚೆನ್ನಾಗಿ ಅಭಿನಯಿಸಿ ಬದಾಮರಾಣಿ ಗಂಗೂಬಾಯಿಯಾಗಿ ಈಗ ಪ್ರವರ್ಧಮಾನಕ್ಕೆ ಬರುತ್ತಿರುವ ಯುವ ಕಲಾವಿದೆ ಕುಮಾರಿ ವೀಣಾ, ಅಷ್ಟೆ ಚೂಟಿ ಅಭಿನಯಿಸಿ ಪ್ರೇಕ್ಷಕರ ಮನಸೆಳೆದರು.
ನಾಟಕದ ಸಂಗೀತ ಮೇಳದ ಸತ್ಯ ಪ್ರಕಾಶ, ಬೆಳಕು, ರಂಗ ಸಜ್ಜಿಕೆಗೆ ನಿರ್ವಹಿಸಿದ ಶಿವಪ್ರಸಾದ ಸತ್ಯ ಪ್ರಶನ್ ತಮ್ಮ ಕಾರ್ಯ ಅಚ್ಚುಕಟ್ಟಾಗಿ ನಿರ್ವಹಿಸಿದರು.
೧೯೮೬ “ಯುವರಂಗ” ರಾಜ್ಯಮಟ್ಟದ ಶ್ರೇಷ್ಠ ನಟ ಪ್ರಶಸ್ತಿ ಗಳಿಸಿದ ಉದಯೋನ್ಮುಖ ಕಲಾವಿದ ರಾಜೇಂದ್ರ ಕಾರಂತ ಮುಖ್ಯ ಪಾತ್ರದೊಂದಿಗೆ ತಮ್ಮ ನಾಟಕ ರಚನಾ ಕಲೆಯ ಜೊತೆ ಸ್ವತಃ ಸಂಗೀತ ಸಂಯೋಜಿಸಿ, ಸಮರ್ಥ ನಿರ್ದೇಶಕರೆನ್ನುವದನ್ನು ಬೆಳಗಾವಿಯ ಪ್ರೇಕ್ಷಕ ಸಮೂಹಕ್ಕೆ ‘ಚಿತ್ತಾರ ತಂಡ’ ಮನರಂಜಿಸುವಲ್ಲಿ ಯಶಸ್ವಿಯಾದರು.
‘ಕಲಾರಂಗ’ವು ಸಂಘಟಿಸಿ, ಪ್ರಥಮವಾಗಿ ಪ್ರದರ್ಶಿಸಿದ ಎರಡು ಯಶಸ್ವಿ ನಾಟಕಗಳ ಕಾರ್ಯಕ್ರಮವನ್ನು ‘ಕಲಾರಂಗ’ದ ಸಂಚಾಲಕ ರವಿ ಕೊಟಾರಗಸ್ತಿ ಅಚ್ಚುಕಟ್ಟಾಗಿ ನಿರ್ದೇಶಿಸಿ ನಡೆಸಿಕೊಟ್ಟರು.
*****