ಯಾರಿವನೋ

ಯಾರಿವನೋ ಇವ ಯಾರವನೋ
ಎಲ್ಲಿಂದ ಬಂದಲ್ಲಿಗೆ ಹೋಗುವವ

ದಿಕ್ಕುಗಳ ಧಿಕ್ಕರಿಸಿದವನೊ
ಸುಖಶಾಂತಿಗಳ ಪೃಥಕ್ಕರಿಸಿದವನೊ
ಸೀಮೆಗಳ ತೊರೆದವನೋ
ಸಿಗದ ಯಾವುದಕೊ ಹಾತೊರೆದವನೋ

ನದಿ ದಾಟಿದವನೊ ಬೆಟ್ಟ ಹತ್ತಿದವನೊ
ಕಣಿವೆ ಕಾಡುಗಳ ನುಗ್ಗಿದವನೋ
ಏಳು ಸಮುದ್ರಗಳ ದಾಟಿದವನೊ
ಕ್ಷಿತಿಜದ ಮಿತಿ ಮೀಟಿದವನೊ

ಗತವ ಮರೆತವನೊ ಸ್ವಾಗತವ ಕಾದವನೊ
ವರ್ತಮಾನಕ್ಕೆ ಅವ್ಯಕ್ತನಾದವನೊ
ಇದ್ದ ಕಡೆಯೆಂದೂ ಇಲ್ಲದಿದ್ದವನೊ
ಇಲ್ಲದಿದ್ದಾಗಲೇ ಇವ ಇದ್ದವನೋ

ವೇಷವೇಷಗಳ ಹಾಕಿದವನೋ
ಕಳಚಿದವನೋ
ಹೊಸ ರಾಗಕೆ ಹೊಸ ಹಾಡಿಗೆ
ಕುಣಿದವನೋ ಇವ ಹಾಡಿದವನೋ

ಇಲ್ಲಿ ಸಿಗದುದನಿನ್ನೆಲ್ಲಿ ಹುಡುಕುವನೊ
ಕೊಡುವವನೋ ಇವ ಪಡೆವವನೋ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೮
Next post ಕಾಲವು ಸರಿಯುತಿದೆ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…