ವಿಧಿಯ ದುರ್ಲಕ್ಷ್ಯಕ್ಕೆ ಜನದ ನಿರ್ಲಕ್ಷ್ಯಕ್ಕೆ
ತುತ್ತಾಗಿ ಕುಳಿತು ನಾನೊಬ್ಬನೇ ದುಃಖಿಸುವೆ
ನನ್ನೀ ಅನಾಥತೆಗೆ. ಕಿವಿಸತ್ತ ಸ್ವರ್ಗಕ್ಕೆ
ಮೊರೆಯಿಡುವೆ ಒಂದೆ ಸಮ. ಬರಿವ್ಯರ್ಥ ಚೀರಿಡುವೆ
ನನ್ನ ಬಾಳನು ನಾನೆ ಶಪಿಸಿ, ಭರವಸೆ ಸುರಿವ
ಯಾರ ಬಾಳನೊ ಬಯಸಿ. ಅವನ ಮೋಹಕ ಮಾಟ,
ಆತ್ಮೀಯರೊಡನಾಟ, ಇವನ ಕಲೆ, ಅವಗಿರುವ
ಅವಕಾಶಗಳ ನೆನೆದು ಇರುವ ಸುಖವೂ ಕಾಟ.
ಆತ್ಮಧಿಕ್ಕಾರಕ್ಕೆ ಸಿಕ್ಕ ಈ ಹೊತ್ತಲ್ಲಿ
ನಿನ್ನ ನೆನಪಾಯಿತೋ, ಅಹ ! ಪ್ರಭಾತದಲ್ಲಿ
ಬುವಿ ಜಿಗಿದು ಮುಗಿಲೇರಿ ದಿವದ ಬಾಗಿಲಿನಲ್ಲಿ
ಹಾಡಿ ಬಾನಾಡಿ ನಲಿಯುವುದು ಮನ ಖುಷಿಯಲ್ಲಿ.
ನಿನ್ನ ಪ್ರೇಮದ ಮಧುರ ಸ್ಮೃತಿಗರಳಿ ಭಾಗ್ಯಗಳು
ಅವರೆದುರು ಚಕ್ರವರ್ತಿಯ ಬಾಳು ಬರಿಧೂಳು.
*****
ಮೂಲ: ವಿಲಿಯಂ ಷೇಕ್ಸ್ಪಿಯರ್
Sonnet 29
When, in disgrace with fortune and men’s eyes
Related Post
ಸಣ್ಣ ಕತೆ
-
ಡಿಪೋದೊಳಗಣ ಕಿಚ್ಚು…
ಚಿತ್ರ: ವಾಲ್ಡೊಪೆಪರ್ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…
-
ಅಮ್ಮ
‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…
-
ಉರಿವ ಮಹಡಿಯ ಒಳಗೆ
ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…
-
ಜುಡಾಸ್
"ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…
-
ಕರಿಗಾಲಿನ ಗಿರಿರಾಯರು
ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…