ಆ ಒಡೆಯನ ಹೊಲದಾಗ
ಮೂಳೆ ಮುರಿಯೋತನಕ,
ಪುಡಿಪುಡಿಯಾಗೋ ತನಕ ನಾ ದುಡದೀನಿ.
ಹರಕ ಮುರಕ ಝೋಪಡ್ಯಾಗ
ನಾ ದಿನಾ ಕಳದೀನಿ,
ಆದರೂ ನನಗಿಲ್ಲ ಒಪ್ಪೋತ್ತಿನ ಕೂಳ,
ಹಸೀದ ನನ್ನ ಹೊಟ್ಟಿ ಚುರುಚುರು ಅನ್ತಾದ,
ಹೊಟ್ಟಿ ಹೋಗಿ ಬೆನ್ನಿಗಿ ಹತ್ತ್ಯಾದ
ಅಂದಾಗ್ಯೂ ಆ ಮಾಲೀಕ ಬೆಳೆಸ್ಯಾನ
ದೊಡ್ಡ ಗುಡಾಣದಂಥ ಹೊಟ್ಟೇನ,
ಆ ಗುಡಾಣದೊಳಗೇ ಅಡಗಿಸ್ಯಾನ
ನನ್ನ ಶ್ರಮದ ಪ್ರತಿಫಲಾನ,
ನನ್ಮೆಲೆ ಆಗ್ತಿರೋ ಅನ್ಯಾಯ
ಸಹಿಸಿ ಸಹಿಸಿ ನಾ ಸಣ್ಣಾಗಿ ಹೋಗಿನಿ,
ನನ್ನ ತಾಳ್ಮೇನ ನೀ ನೋಡಬ್ಯಾಡ ಪರೀಕ್ಷಿಸಿ,
ನ್ಯಾಯಕ್ಕಾಗಿ ನಾ ಹೋರಾಡಲೇಬೇಕು,
ತೆಪ್ಪಗ ಮುಖ ಸೊಪ್ಪು
ಹಾಕೋದಿಲ್ಲ ನಾನೀಗ
ಸಿಡಿದೇಳತೀನಿ ನಾನು
ಭಂಡರ ಕ್ರೂರ ಮುಷ್ಟಿಯಿಂದ
ಶತಮಾನಗಳ ದಾಸ್ಯ, ಗುಲಾಮಗಿರಿ
ಶೋಷಣೆಯಿಂದ ನಾನು ಎಚ್ಚೆತ್ತಾಗ,
ಕತಕತ ಕುದಿತಾದ ನನರಕ್ತ
ಬಚ್ಚಲು ರೊಜ್ಜಿನ
ಹೊಲಸು ತುಂಬಿದ ಸಮಾಜದ
ಅವ್ಯವಸ್ಥೆಯ ವಿರುದ್ಧ ಹೋರಾಡಲು,
ಶೋಧಿಸಿ ತೆಗದ್ರ ನನ್ನ ದೇಹದಾಗಿಲ್ಲ ಸಿಂಪಿ ರಕ್ತ,
ಆದರೂ ಅದು ಕುದಿತಾದ ಕತಕತ,
ಕ್ರಾಂತಿ ಅದಾ ಈಗ ಬೂದಿ ಮುಚ್ಚಿದ ಕೆಂಡದಾಂಗ
ಶೋಷಣಿಗೊಳಗಾದ ನನ್ನ
ಪ್ರತಿಯೊಂದು ಮೂಳೆಯೂ
ಅಕ್ರೋಶದಿಂದ ಕೂಗತಾವ,
ತನ್ನ ಶ್ರಮದ ಪ್ರತಿಫಲವನ್ನ ಕೇಳತಾವ.
*****
Related Post
ಸಣ್ಣ ಕತೆ
-
ಗಿಣಿಯ ಸಾಕ್ಷಿ
ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…
-
ವಲಯ
ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…
-
ಅಂತರಂಗ ಶುದ್ಧಿ ಬಹಿರಂಗ ಶುದ್ಧಿ
ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…
-
ಗುಲ್ಬಾಯಿ
ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…
-
ಕರಾಚಿ ಕಾರಣೋರು
ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…