ಸ್ವಗತ

ನನ್ನ ಎದೆಯನ್ನೇ ಬಗೆದಿಟ್ಟ ಹಾಗಿದೆ
ಹೆಣ್ಣನ್ನು ಗುಳೆ ಎಬ್ಬಿಸುವ ವಿವಾಹವೆಂಬ
ಈ ಶಿಷ್ಟಾಚಾರದ ಗೊಂದಲ ಗಿಜಿ, ಗಿಜಿ

ಯಾರು ಯಾರೋ ಏನೇನೋ ಹೇಳುತ್ತಿರುತ್ತಾರೆ
ಕೇಳುತ್ತಿರುತ್ತಾರೆ
ಒಂದರ ತಲೆ ಬುಡವೂ ಗೊತ್ತಾಗುವುದಿಲ್ಲ

ನಾನು,
ಈ ಜನರ ಕೈಗೊಂಬೆ
ನನ್ನ ನಡೆ ನುಡಿ ಎಲ್ಲಾ ಯಾಂತ್ರಿಕ
ಯಾರು ಏನು ಹೇಳಿದರೂ ಕೇಳಬೇಕು
ಯಾರು ಏನೇ ತೋರಿಸಿದರೂ ಮಾಡಬೇಕು
ಯಾವುದೆಂದರೆ ಅದಕ್ಕೆ
ಯಾವಾಗ ಅಂದರೆ ಆಗ ಸಿದ್ಧವಾಗಬೇಕು.

ಸದ್ಯ –
ನನ್ನ ತಂದೆ ತಾಯಿ ಸ್ಥಿತಿ
ನನ್ನ ಭವಿತವ್ಯದ ತದ್ರೂಪಾಗಿದೆ
ಅವರಿಗೆ, ಇವರಿಗೆ, ಎಲ್ಲರಿಗೂ ಸಮಜಾಯಿಷಿ ನೀಡಬೇಕು
ಎಲ್ಲಕ್ಕೂ ಹೊಣೆಯಾಗಬೇಕು
ಎಲ್ಲಾ ಹೊರಬೇಕು
ಸುಮ್ಮನೆ ಸಾಗಿಸಿಕೊಂಡು ಹೋಗುತ್ತಿರಬೇಕು
ತಮ್ಮನ್ನು, ತಮ್ಮೆದೆಲ್ಲವನ್ನೂ ಮರೆಯಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂಟೆತ್ತಿನ ಬಂಡಿ ನಾ ಈವರೆಗು
Next post ಆಕಾರ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…