ಗಣಪತಿ ಬಂದಾನೋ

ಗಣಪತಿ ಬಂದಾನೋ ಚೌತಿ ಗಣಪಣ್ಣಾ
ವರ್ಷಾ ವರ್ಷಾ ಹರ್ಷಾ ಹರ್ಷಾ ತಂದೆಣ್ಣಾ ||ಪಲ್ಲ||

ಮನಿಯಾ ಜಗಲಿ ಊರಾ ಬಗಲಿ ಮೆರೆದೆಣ್ಣಾ
ಎದಿಯಾ ಬಾಗ್ಲಾ ದಡಾ ದಡಾ ತೆಗೆದೆಣ್ಣಾ
ಚುಂವ್‌ಚುಂವ್ ಚುಂವ್‌ಚುಂವ್ ಇಲಿಯಾ ಮೇಲೆ ಕುಂತೆಣ್ಣಾ
ಮವ್‌ಮೆವ್ ಮೆವ್‌ಮೆವ್ ಬೆಕ್ಕಿನ ಜವ್ರಾ ಮುರಿದೆಣ್ಣಾ ||೧||

ಝಗ್‌ಝಗ್ ದೀಪಾ ಭುಗ್‌ಭುಗ್ ಭೂಪಾ ಭರಮಣ್ಣಾ
ಢುಂಢುಂ ಭಾಜಿ ಧಡಲ್‌ಭಾಜಿ ಗುಂಡಣ್ಣಾ
ಹೊಟ್ಟೀ ಗಣಪಾ ಸೊಂಡಿ ಠೊಣಪಾ ಯಾಕಣ್ಣಾ
ಕೋತಿ ಕಾಮಾ ಕಿಲಾಡಿ ರಾವ್ಣಾ ತುಳಿದೆಣ್ಣಾ ||೨||

ಮೌನಿ ಮಾನಿ ಜ್ಞಾನಿ ಯೋಗಿ ನೀನಣ್ಣಾ
ಭಾರಿ ಲೈಟು ದಿವಾಳಿ ನೈಟು ಸಾಕಣ್ಣಾ
ಶಾಂತರ ಶಾಂತಾ ಸುಂದರ ಸತ್ಯಾ ನೀನಣ್ಣಾ
ಇಸ್ಪೀಟಾಟಾ ಮಸಲತ್ ಮಾಟಾ ನಿಲ್ಸಣ್ಣಾ ||೩||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆನಿವರ್ಸರಿ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೪

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…