ಮದುವೆಯ ಆಟವೆ ತಿಳಿಯದ ಮಗುವಿಗೆ
ಮದುವೆ ಮಾಡಿದರೆ ಹೇಗಮ್ಮ
ಅಮ್ಮನಾಗುವ ದಿನಗಳು ಬಂದರೆ;
ತಾನಮ್ಮನಾಗುವ ದಿನಗಳು ಬಂದರೆ
ಗುಮ್ಮನಾರು ನೀ ಹೇಳಮ್ಮ? //ಪ//
ಅಕ್ಷರವನ್ನು ಕಲಿಯಬೇಡವೆ
ಚಿಣ್ಣರೊಡನೆ ಕುಣಿದಾಡಬೇಡವೆ
ಬಳ್ಳಿ ತಾನು ಗಿಡವಾಗುವ ಮುನ್ನವೆ
ಫಲ ಕೊಡಬೇಕು ಎಂಬುದು ನ್ಯಾಯವೇ?
ಹೆಣ್ಣೆಂದರೆ ಅದು ಬಣ್ಣದ ಗೊಂಬೆಯೇ?
ಮರವನ್ನೇ ಆಶ್ರಯಿಸಿದ ಬಳ್ಳಿಯೇ?
ಬುದ್ಧಿ ಭಾವ ಜೊತೆ ಗಟ್ಟಿಯಿರದ ತನು
ಸಂಸಾರ ಭಾರವ ಹೊರುವುದೆ ಏನು?
*****