ಶಿವಲೋಕದಿಂದ ಒಬ್ಬ ಸಾಧು ಬಂದಾನು
ಶಿವನಾಮವನ್ನು ಕೇಳಿ ಅಲ್ಲಿ ನಿಂತಾನು ||ಪ||
ಮೈತುಂಬ ಬೂದಿಯನ್ನು ಧರಿಸಿಕೊಂಡಾನು
ಕೊರಳೊಳು ರುದ್ರಾಕ್ಷಿ ಕಟ್ಟಿಕೊಂಡಾನು ||೧||
ಮೈಯಲ್ಲಿ ಕಪನಿಯ ತೊಟ್ಟುಕೊಂಡಾನು
ಕೈಯಲ್ಲಿ ತ್ರಿಶೂಲ ಹಿಡಿದುಕೊಂಡಾನು ||೨||
ಊರ ಹೊರಗೆ ಒಂದು ಮಠ ಕಟ್ಟಿಸ್ಯಾನು
ಮಠದ ಬಾಗಿಲೊಳಗೆ ತಾನೇ ನಿಂತಾನು
ಒಂಭತ್ತು ಬಾಗಿಲ ಮನೆಗೆ ಹಚ್ಚ್ಯಾನು ||೩||
ಧರಿಯೊಳು ಮೆರೆಯುವ ಶಿಶುನಾಳಧೀಶನು
ಶಿಷ್ಯ ಶರೀಫನ ಕೂನ ಹಿಡಿದಾನು ||೪||
****