ಕೋಳಿ ಕೂಗಿದರೇನೇ
ಬೆಳಗಾವುದೆಂಬ ಕಾಲವೊಂದಿತ್ತು|
ನನ್ನ ಮನೆ ಬೆಂಕಿಯಿಂದಲೇ
ಊರ ಜನರ ಬೇಳೆ ಬೇಯ್ಯುವುದೆಂಬ
ಅಜ್ಞಾನದ ಕಾಲವೊಂದಿತ್ತು||
ಎಲ್ಲರೂ ಸರ್ವ ಸ್ವತಂತ್ರರು
ಯಾರ ಹಿಡಿತದಲಿ ಯಾರಿಲ್ಲ|
ಅಜ್ಞಾನಿಗಳು ಅಜ್ಞಾನದಿಂದ
ಮುಗ್ಧರ ಆಳಬಯಸುವರು|
ಸತ್ಯವನೆಂದೂ ಮುಚ್ಚಿಡಲಾರರು
ಬೆಳಕ ಮುಷ್ಠಿಯಲಿಡಿಯಬಹುವುದೇ ? ||
ಸಕಲ ಜೀವ ಸಂಕುಲಕೆ
ಗಾಳಿ ಮಳೆ ಬೆಳಕು ಭಾಗ್ಯಗಳು
ಉಚಿತವಾಗಿ ಸಿಗುತ್ತಿರುವಾಗ
ಮಧ್ಯವರ್ತಿಗಳ ಭಯವೇಕೆ?
ಮತ್ತವರು ಬೇಕೇಕೆ?
ನಾವು ನಾವೇ ಒಬ್ಬರಿಗೊಬ್ಬರು
ಸ್ನೇಹ ಹಸ್ತವ ನೀಡಿ
ಉಪಯೋಗ ಲಭ್ಯವಾಗುತ್ತಿರಲು||
ಕಾಲ ಬಂದಿದೆ ಒಬ್ಬರನೊಬ್ಬರು
ಅರಿತು ಸಹಾಯದಿ ಬದುಕುವ|
ಮಿತವ್ಯಯ, ಮಿತ ಆಹಾರ ಪದ್ಧತಿ
ಆರೋಗ್ಯಕರ ಹಾಗೂ ಸುಸಂಸ್ಕೃತಿ|
ಬೇಡ ಅನ್ಯರ ಸ್ವತಂತ್ರವನಾಳುವ ಮತಿ
ಅವಶ್ಯಕತೆಯನರಿತು ಆಟವಾಡುವುದು,
ಸಮಯಸಾಧಕ ಬುದ್ಧಿ, ಹಸಿದವರೊಡನೆ ಸ್ಪರ್ದ್ಧಿ
ಅದು ನಿನಗೇ ಮಾರಕ, ಹಾನಿಕಾರಕ||
*****