ಮೂಡಿದ ಹೂ ಮಲ್ಲಿಗೆ
ನಗುವೆ ಏತಕೆ ಮೆಲ್ಲಗೆ
ಸರಸವಾಡುವ ನೆಪದಲಿ
ನನ್ನ ಮರೆತೆಯೇನೆ ||
ನಿನ್ನ ಕಾಣುವಾತರದಿ
ಬಂದು ನಿಂದೆ ನಿನ್ನ ಬಾಗಿಲಿಗೆ
ಒಳಗೆ ಬಾ ಎಂದು ಕರೆಯಲು
ಏಕೆ ಮುನಿಸು| ನಾ ನಿನ್ನ ಗೆಳತಿ
ನನ್ನ ಮರತೆಯೇನೇ ||
ಚೌಕಾಬಾರ ಆಡುವಾಗ ಬಳೆಗಳ
ತೊಡುವಾಗ ಪ್ರಾಣ ಸಖಿ ಎಂದಾಗ
ಚಂದಿರನ ನೆನಪಲ್ಲಿ ನಾಚಿ ಮೊಗ್ಗಾದೆ
ನಿನ್ನ ಕಂಗಳಲ್ಲಿ ಕಂಡೆ ಚಂದ್ರಕಾಂತಿ ಬಿಂಬ ||ಓ||
ಬಾಡಿದ ಹೂವಂತೆ ಮೂರು ದಿನದ
ಚಿಂತೆ| ಸೋಲು ಗೆಲುವು ಉಂಡ
ಮನಕೆ ಎಲ್ಲವು ನಿಶ್ಚಿಂತೆ ನನ್ನ
ಗೆಳತಿ ನಿನ್ನ ನೆನೆದು ಬಂದ ಇಲ್ಲಿಗೆ ||ಓ||
ಬರೆಯುವೆ ನಾ ಪತ್ರವನು ನಿನ್ನ
ಹಾರೈಸಿ ಎಂದಾದರೂ ಒಂದು
ದಿನ ಕಾಣುವೆ ನಿನ್ನ ಸುಖದ
ಸೋಪಾನದಲ್ಲಿ ನೀ ಮೆಲ್ಲಗೆ ನಗುತಿರು
ಮಲ್ಲಿಗೆ ||ಓ||
ಮರೆಯದಿರು ನನ್ನ ನೀನು
ಮರೆತೆಯಾದರೆ ಜೀವವಿಲ್ಲದ
ಗೊಂಬೆಯಂತೆ ಸ್ನೇಹ ಎಂಬುದು
ಬಾಳ ಪಯಣವು ಸ್ಫೂರ್ತಿಯಂತೆ ||
*****