ಬಾಲ್ಯದ ಅಂಕಣ
ಬಾಗಿನ ಸಿಂಚನ
ನಿನ್ನ ಮ್ಯಾಗಿನ
ಪ್ರೀತಿ ಬಾಲೆ
ಹಸಿರ ಹಂದರದಾಗ
ಇದು ಏಕ ಚಿತ್ತ ರೂಪ ||
ನೇಸರದಾಗ ಹಸಿರ
ಕಾಣುತ್ತಿ ನೀನು
ಪಡುವಣದೊಳಗಣ
ತೊಟ್ಟಿಲ ತೂಗುತ್ತಿ
ನಿನ್ನ ಬಾಳ್ವೆ ಸಿದ್ದ ಹಸ್ತ
ಇದು ಏಕ ಚಿತ್ತ ರೂಪ ||
ಗೆಳತಿ ಹತ್ತಾರು
ಬಣ್ಣ ಸುತ್ತಾರು
ನೇಯ್ಗೆಕಾಣೆ
ಮಿಕ್ಕವು ನಿನ್ನ
ಜನಸಾರುವ ನೀತಿ
ಇದು ಏಕ ಚಿತ್ತ ರೂಪ ||
ಭೀತಿಯಾಗ ನಿನ್ನ
ಬಾಳ್ಯಾಗ ಮಾಗ್ಯಾವು
ಮನಸಾಗ ಕಂದರು
ಚಿಂತೆ ಏತಕೆ!
ಮಿಂದಾಗ ಸೋಲು
ಕಾಣುವ ಗೆಲುವು
ಇದು ಏಕೆ ಚಿತ್ತ ರೂಪ ||
ಮಣ್ಣಾಗ ನಿಂದಾಗ
ಹರಳಾಕ ಕಂಡಾಗ
ಮರುಳಾಟ ಚಂದಾವು
ಸೂರ್‍ಯಾನ ಸೇರ್‍ಯಾವೊ
ಕಾಯ್ವಾಗ ಸೆರಗು
ಕರೆದಾಗ ನೋಡ
ಇದು ಏಕಚಿತ್ತ ರೂಪ ||
ಕರಡಾಗ ನೋಡ
ಶರಣಾರ ಮುಂದ
ಹಣತೆ ನೀ ಕಾಣೋ
ಭವ ಬಂಧನ
ಸ್ಥಿತಿ ವಂದನ
ಮಂದಿಗೆ ಸಲ್ಲುವ
ಇದು ಏಕ ಚಿತ್ತ ರೂಪ ||
ಸತ್ಯಾಗ ನಿಷ್ಟಾಗ
ಆತ್ಮನ ರೂಪಾಗ
ಧರೆಯಾಗ ನಿನ್ನತನ
ತಿಳಿವಿಗೆ ಬದುಕು
ಹಚ್ಚುವ ದೀವಿಗೆ
ಕಟ್ಟುವ ಸೂರು
ಇದು ಏಕ ಚಿತ್ತ ರೂಪ ||
ವೀಳ್ಯಾಗ ಆಡೋ
ಹೂವಾಗ ಜಳಕ
ಕನಸಾಗ ನಿಲುವು
ಜಗದಾಗ ಭವ
ನಿನ್ನತನದ ಸಂತಿಗೆ
ಕಾಯ್ವನು ಮನಸ
ಇದು ಏಕ ಚಿತ್ರ ರೂಪ ||
*****