ಪಂಚಮಿ ಹಬ್ಬ
ಬಂತು ನಾಡಿಗೆ
ಸಂಭ್ರಮ
ಸಡಗರ ನಾರಿಯರಿಗೆ
ಮಡಿಯುಟ್ಟು ನಾರಿಯರೆಲ್ಲ
ಮುತ್ತಿಗೆ ಹಾಕುವರಲ್ಲ
ನಾಗರಾಜಗೆ
ಅಳ್ಳುಂಡೆ,
ಎಳ್ಳುಂಡೆ, ತಂಬಿಟ್ಟು
ಮೀಸಲು ಅಡುಗೆಯ
ಎಡೆಯಿಟ್ಟು
ಅಂಗನೂಲಿನ
ವಸ್ತ್ರವ ಮಾಡಿಟ್ಟು
ಭಕ್ತಿ ಭಾವದಿ
ಹುತ್ತಕೆ ಸುತ್ತಿಬಿಟ್ಟು.
ಮನೆ ಮಂದಿಯರನು
ಮನದಲ್ಲಿ ನೆನೆದು
ಹುತ್ತದ ಮೇಲೆ
ಹಾಲನ್ನು ಎರೆದು
ಬೇಡುವರು ನಾಗರಾಜ
ಕಾಪಾಡು ಎಂದು
ಭಕ್ತಿ ಭಾವದ
ಪರವಶದಲಿ ಮಿಂದು.
*****