ಜೀವನದ ಅತ್ಯುನ್ನತೆಯ ಆದರ್ಶ
ಅದುವೆ ಹರಿಯ ದೈವಭಕ್ತಿ
ದೇವರನು ಮರೆತು ಏನು ಓದಿದರೂ
ಅದು ದೇಹಕ್ಕೆ ಭುಕ್ತಿ
ಮನಸ್ಸಿನ ಮೂಲೆ ಮೂಲೆಗೆ ಇಣಕು
ಒಳಗಿರುವ ದೋಷಹೊರ ಹಾಕು
ಖಾಲಿಯಾಗಿದ ಮನದ ತುಂಬ
ತುಂಬು ದೇವನಾಮ ಸರಕು
ಎಸೋ ವರಷವೂ ಮರೆತೆ ನಿನ್ನ ನಿ
ಮೆರೆದ ಮೋಜುಗಳಲಿ
ಈಗ ಕರೆ ಬಂದಿದೆ ಅಂತರಂಗದಿಂದ
ಎದ್ದೇಳು ಮೆರೆ ದೈವಲೀಲೆಯಲಿ
ಕ್ಷಣ ಕ್ಷಣ ನಿನ್ನವೆಲ್ಲವೂ ಕಸಿಯುತ್ತಿವೆ
ನೀನಾಗಿರುವೆ ಈಗ ಬರಿದು
ಇವತ್ತೊ ನಾಳೆಯೋ ತೊರೆದೆಲ್ಲವೂ
ಹೋಗುವೆ ಸಾವಿನತ್ತ ಸರಿದು
ನಿನ್ನ ಬದುಕಾಲಿ ಪೂಜನೀಯ
ಹೆಜ್ಜೆಗಳಾಗಲಿ ಪಳೆಯುಳಿಕೆ
ನೀನು ಸವಿಯುವಗಳಿಗೆಗಳೆಲ್ಲವೂ
ಮಾಣಿಕ್ಯ ವಿಠಲನ ಪಾದಕೆ
*****