ಕಣ್ಣು ಮುಚ್ಚಾಲೆ

ಎಷ್ಟೊತ್ತಿನ ವರೆಗೆ ನಿನ್ನ ಕಣ್ಣ ಮುಚ್ಚಾಲೆ
ನೀನು ಕಾಡಿದರೆ ನಾ ಸಹಿಸೆನು
ಎನ್ನ ಮನದ ಭಾವಗಳು ನಿನಗಾಗಿ ಸೋತಿವೆ
ನಿನ್ನ ರೂಪಕಾಣದೆ ನಾ ತಾಳೆನು

ಏಸು ಮನುಜರಿದ್ದರೂ ನಾನು ತಬ್ಬಲಿ
ಪ್ರಪಂಚ ಇದು ಕಾಣದ ಹೆಬ್ಬುಲಿ
ಎದುರಾಳಿಯಂತೆ ನಿತ್ಯ ಹೋರಾಟವು
ನನ್ನ ಬದುಕು ಸಾಗಿದೆ ಇದೇ ಮಬ್ಬಲಿ

ನಿನ್ನ ತಾಣದಿ ಬಂದೆ ನಿನ್ನ ಮರೆತೆ
ಎದೆಯ ಕರೆಯನ್ನು ಕೇಳದೆ ಹೋದೆ
ತನುವಿನ ಹಮ್ಮಿನಲಿ ನಿತ್ಯ ಮರೆದೆ
ಇನ್ನು ತಾಳೆನು ನಾನು ಈ ಭವದ ಭಾದೆ

ನಿನ್ನ ನೆನಪೇ ಅಮೃತವು ಮರೆವೆ ವಿಷ
ಇಂದ್ರಿಯ ಭೋಗವೆಲ್ಲ ಬಿಸಿಲು ಗುದರೆ!
ನನ್ನ ಅಸಹಾಯಕತೆ ಹರಿಯೆ ಅರಿಯಲಾರೆಯಾ
ಮಾಣಿಕ್ಯ ವಿಠಲನ ಮೊರೆ ಕೇಳದಾದರೆ!!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೊಯ್ಯದಿರು ಮನವೇ
Next post ಆದಿಮಾನವ ಭೋಗಮಾನವನಾದ ಕಥೆ

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…