ನೊಯ್ಯದಿರು ಮನವೇ
ಯಾರೇ ತುಚ್ಯವಾಗಿ ಕಂಡರೂ|
ತಳಮಳಿಸದಿರು ಜೀವವೇ
ವಿಪರೀತ ಪೃಚ್ಚರ ಮಾತಿಗೆ||
ಅವಮಾನ ಮಾಡಲೆಂದೇ
ಕಾಯುವವರು ಕೆಲವರು|
ತಲ್ಲಣಿಸದಿರು ಜೀವವೇ
ಕಾಲವೇ ಉತ್ತರಿಸುವುದು ಮೆಲ್ಲಗೆ||
ನಿನ್ನ ಒಳಮನಸನೊಮ್ಮೆ ಕೇಳು
ಇದು ನಿನಗೆ ಸರಿಯೇ ಎಂದು|
ಸರಿಯಿಲ್ಲವೆಂದರೆ ಕ್ಷಮೆಯಾಚಿಸು
ತಿದ್ದಿ ಸರಿಪಡಿಸಿಕೊ ಇಂದೇ
ಮುಂದೆ ಮರುಕಳಿಸಬಾರದೆಂದು||
ತಾಳಿದವರು ಬಾಳಿಯಾರು
ಎಂಬ ಗಾದೆ ಮಾತಿನಂತೆ
ಸಹಿಸಿಕೋ ಎಲ್ಲವನೂ|
ಕಾಲ ಬರುವುದು ನಿನಗೆ,
ಅವರಂತೆ ನೀನೂ ನಡೆದರೆ
ವ್ಯತ್ಯಾಸವೇನಿಬ್ಬರಿಗೆ||
ಶಿಲ್ಪಿ ಉಳಿಯಿಂದ ಕಡೆದಷ್ಟು
ಬಲು ಸುಂದರ ಮೂರ್ತಿಯಾಗಿ
ಪೂಜೆಗೆ ರೂಪಗೂಳ್ಳುವೆ|
ಎಲ್ಲರಿಂದ ಗೌರವ ಸ್ವೀಕರಿಸುವೆ
ಸಹಿಸಿಕೊ ಜೀವವೇ ನೀ ಅಲ್ಲಿಯವರೆಗೆ||
*****