ಇದುವೆ.. ಇದುವೆ.. ನಮ್ಮ ಕನ್ನಡ ನಾಡು
ಸರ್ವರ ಸುಖವ ಬಯಸಿದ ನಾಡು
ಸಾಮಾಜಿಕ ನ್ಯಾಯ; ಕಾಯಕ, ಭಕ್ತಿಯ ಬಸವನ ಬೀಡು
ದಿಕ್ಕು, ದಿಕ್ಕಲಿ ಜ್ಯೋತಿಯ ಹೊತ್ತಿಸಿ
ಧರ್ಮ, ಸಂಸ್ಕೃತಿ ಬೆಳಗಿದ ನಾಡು.
ಅಂಧಾನುಕರಣೆ, ಆಚರಣೆಗಳ
ಬುಡವನು ಅಲುಗಿಸಿ, ಕ್ರಾಂತಿಯ ಮೊಳಗಿಸಿ
ಸಂಗೀತ, ಸಾಹಿತ್ಯ ಸಿರಿಯನು ಮೆರೆದ
ಸಂತ, ಪುರಂದರ, ಕನಕರ ನಾಡು.
ಬದುಕಿನ ಗಾಢ ಅನುಭವಗಳನು
ಸರಳೀಕರಿಸಿ ಸುಂದರವಾಗಿ ಶ್ರುತಪಡಿಸಿರುವ
ವಚನಕಾರರು, ಜನಪದರು, ಸರ್ವಜ್ಞರು ಬಂದ
ಶಾರದಾ ಪೀಠದ…
ಚೆಲುವು, ಕಲೆಗಳ ಸಂಗಮ ನಾಡು.
ಅನ್ಯರ ಹೆಣ್ಣು, ಹೊನ್ನು, ಮಣ್ಣು
ಕಣ್ಣೆತ್ತಿಯು ನೋಡದ ಹಿರಿಗುಣದವರು
ದುಷ್ಟರ, ದುರುಳರ ಸಂತತಿ ತರಿದು
ಶಾಂತಿ ಸಜ್ಜನಿಕೆ ಕಂಕಣ ಬದ್ಧ
ಶ್ರೀ ಭುವನೇಶ್ವರಿ ಮಕ್ಕಳ ನಾಡು.
*****