ಹದಿನಾರರ
ಹರೆಯದೋಕುಳಿಯಲ್ಲಿ
ಕಾಲ ಜಗಮಘ|
ಬದುಕು ಹರ್ಷಮಯ
ಜಗವು ವರ್ಣಮಯ||
ಮನದ ಮಾತಿಗಿಂತ
ರೂಪ ಆರ್ಕಷಣೆಗೇ ಒಲವು|
ಬುದ್ಧಿ ಮಾತಿಗಿಂತ
ಹೃದಯದ ಮಾತಿಗೆ ಸೆಳವು|
ಎಲ್ಲಾ ಅಂದುಕೊಂಡಂತೆ
ಆದ್ದದೇ ಆದರೆ ಶೃಂಗಾರವೀಕಾಲ||
ಸ್ನೇಹ ಜೊತೆಯಲಿ ಪ್ರೀತಿ
ತಾನಾಗಿ ಚಿಗಿರೊಡಯಲಿ|
ಪ್ರೀತಿಯಲಿ ನಂಬಿಕೆ ಇರಲಿ, ಆದರೆ
ಅತೀಯಾದ ಸಲಿಗೆ ಒಳ್ಳೆಯದಲ್ಲ|
ಮೋಹದಾವೇಷ ತರವಲ್ಲ
ನಿನ್ನಾಸೆಗಳಿಗೆ ಅಂಕುಷವಿರಲಿ
ಎಲ್ಲರಾ ಭಾವನೆಗಳಿಗೂ
ಅವರದ್ದೇ ಆದ ಬೆಲೆ ಸಿಗಲಿ||
ಬರೀ ಹರೆಯದ ಆಕರ್ಷಣೆಗೆ
ಒಳಗಾಗಿ ಸಚ್ಚರಿತ್ರೆಗೆ ಧಕ್ಕೆವಾಗೆ
ಪರಿತಪಿಸುವುದು ಪ್ರೀತಿಯಲ್ಲ |
ವಿಂಚಿ ಹೋದ ಮೇಲೆ ಕಾಲವನು
ಚಿಂತಿಸೆ ಶಪಿಸಿದರೆ ಫಲವಿಲ್ಲ|
ಭಗ್ನ ಪ್ರೇವಿಗಳಾಗದೆ
ಸಂಯಮದಿ ನಿಜ ಪ್ರೀತಿಯ
ರೂಪವ ಅರಿಯೇ ಉತ್ತಮ|
ಗೆದ್ದರೆ ಇಬ್ಬರೂ ಗೆಲ್ಲುವ
ಸೊತರೆ ಇಬ್ಬರು ಸೋಲುವ
ಏಕೈಕ ಪ್ರಕೃತಿ ಪುರುಷನ ಆಟ
ಈ ಪ್ರೀತಿ ಪ್ರೇಮದಾಟ||
*****