ಏನೇ ಬಂದರೂ

ಏನೇ ಬಂದರೂ ನೀ ದಯೆತೋರು
ನಿನ್ನಾ ದಯೆಯಲಿ ಬಾಳನು ನೀಡು |
ಬಾನಿಗೆ ರವಿಕಾಂತಿ ಶೋಭಿಸುವಂತೆ
ನನ್ನೀ ಬಾಳಿಗೆ ನೀ ಬೆಳಕಾಗು||ಕೃಷ್ಣಾ||

ಕಷ್ಟವೇ ಬರಲಿ, ಬದುಕಲಿ
ಕಾಳಿರುಳ ಕತ್ತಲೆ ಕವಿಯಲಿ|
ನಿನ್ನಾಕರುಣೆಯ ಕಿಡಿಯೊಂದಿರಲಿ
ಎದುರಿಸಿ ಜಯಿಸುವೆ ಕಠಿಣ ಸಂಕೋಲೆ||

ನಿಂತ ನೆಲವೆ ಕುಸಿಯಲಿ
ಜೀವವಿದು ಪಾತಾಳವನೇ ಸೇರಲಿ|
ನಿನ್ನಾಕರುಣೆಯ ಕರೆಯದು ಕೇಳೆ
ಜ್ವಾಲಾಮುಖಿಯಂತೆ ನೆಲಸೀಳಿ ಬರುವೆ||

ಬರವೇ ಬರಲಿ ಕ್ಷಾಮವೇ ಇರಲಿ
ಭೀಕರ ರೋಗವೇ ಬಳಲಿಸಿ ಬೇಯಿಸಲಿ|
ನಿನ್ನಾ ಅಭಯವು ಅರಳಿದ ಮರುಕ್ಷಣ
ನಾನುದ್ಭವಿಸುವೆ ಶಿಲ್ಪಕಲಾಮೂರ್ತಿಯಂತೆ
ಹೊಳೆಯುತಲಿ ಕಣಕಣ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮ್ಮ ಆರೋಗ್ಯದಲ್ಲಿ ವಿಟಮಿನ್ನುಗಳ ಪಾತ್ರವೇನು?
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೧೨೩

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…