ಇರಲಿ ನಮ್ಮೆಲ್ಲರ ಮನೆಯಲಿ
ಕನ್ನಡದ ಬಾವುಟ|
ಹಾರಲೆಲ್ಲರ ಮನದಲಿ
ಅದುವೆ ಪಟಪಟ|
ಕನ್ನಡವೆಂದರೆ ಅದು
ಬರಿಯ ಭಾಷೆಯಲ್ಲ
ನಮ್ಮನಿಮ್ಮೆಲ್ಲರ ಮಾತೃಭಾಷೆ|
ಅತ್ಯಧಿಕ ಜ್ಞಾನಪೀಠಗಳ
ತಂದುಕೊಟ್ಟಾ ಭಾಷೆ||
ಆಡುವಾ ಮಾತಿನಂತೆಯೇ
ಬರೆಯುವಾ ಭಾಷೆ|
ಬರೆದರೆ ಮುತ್ತು ಮಣಿಗಳ
ಪೋಣಿಸಿದಂತೆ ಕಾಣುವಾ ಭಾಷೆ||
ಕರ್ನಾಟಕ ಸಂಗೀತಕೆ
ಇದುವೆ ಮಾತೃಭಾಷೆ||
ಪ್ರತಿ ವರ್ಷ ಅತೀಹೆಚ್ಚು
ಹೊಸಾ ಹೊಸ
ಪದಗಳು ಹುಟ್ಟಿಕೊಳ್ಳುವ ಭಾಷೆ||
ಕನ್ನಡವೊಂದು ಸುಮಧುರ ಭಾಷೆ
ಕನ್ನಡವೊಂದು ಸುಲಲಿತ ಭಾಷೆ |
ಕಸ್ತೂರಿ ಕನ್ನಡ ಈ ನಮ್ಮ ಭಾಷೆ
ಕವಿಜನ ಶ್ರೇಷ್ಟರು ಬೆಳೆಸಿದಾಭಾಷೆ
ದಾಸರು ಶರಣರ ನೆಚ್ಚಿನ ಭಾಷೆ||
ನಮ್ಮ ಬಾವುಟದಲ್ಲಿದೆ
ಕೆಂಪು ಹಳದಿಯ ಬಣ್ಣ|
ಕೆಂಪು ಕನ್ನಡಾಂಬೆಯ
ಹಣೆಯ ಕುಂಕುಮ ತಿಲಕ |
ಹಳದಿ ಕನ್ನಡಾಂಬೆಯ ಕೆನ್ನೆಗಚ್ಚುವ ಅರಿಶಿಣ
ಇಂಥ ವಿಶೇಷವೀ ಬಾವುಟ||
ಹುಟ್ಟಲಿ ಹತ್ತಾರು ರಾಷ್ರ್ಟಕವಿಗಳು
ಹುಟ್ಟಲಿ ಹತ್ತಾರು ವರಕವಿಗಳು|
ಬೆಳಗಲಿ ನೂರಾರು ಸಮಗ್ರ ಸಾಹಿತಿಗಳು
ಬರಲಿ ಇನ್ನತ್ತಾರು ಜ್ಞಾನಪೀಠ ಪ್ರಶಸ್ತಿಗಳು||
*****