ಎಷ್ಟೋ ವರ್ಷಗಳ ನಂತರ ಕಾಣುತ್ತೇವೆ.
ಸಭ್ಯತೆಯಿಂದ ಕೈ ಕುಲುಕಿ ‘ನೈಸ್ ಮೀಟಿಂಗ್ ಯೂ’ ಅನ್ನುತ್ತೇವೆ.
ನಮ್ಮ ಹುಲಿಗಳು ಹಾಲು ಕುಡಿಯುತ್ತವೆ
ನಮ್ಮ ರಣಹದ್ದುಗಳು ನೆಲದ ಮೇಲೆ ನಡೆಯುತ್ತವೆ
ನಮ್ಮ ತಿಮಿಂಗಿಲಗಳು ನೀರೊಳಗೆ ಬಚ್ಚಿಟ್ಟುಕೊಳ್ಳುತ್ತವೆ
ನಮ್ಮ ತೋಳಗಳು ಬೋನಿನ ತೆರೆದ ಬಾಗಿಲ ಮುಂದೆ ಆಕಳಿಸುತ್ತವೆ
ನಮ್ಮ ಹಾವುಗಳು ಹೆಡೆ ಮುಚ್ಚಿವೆ
ಕೋತಿ… ಸ್ಪೂರ್‍ತಿ, ನವಿಲು…ಗರಿ
ಬಾವಲಿ… ಭೂತಕಾಲ ಎಲ್ಲ ನಮ್ಮಿಂದ ಹಾರಿಹೋಗಿವೆ.
ಅರ್ಧ ವಾಕ್ಯ ಆಡಿ ನಿಶ್ಯಬ್ದವಾಗುತ್ತೇವೆ
ಇನ್ನು ಮೋಕ್ಷವಿಲ್ಲ ಎಂಬಂತೆ ಮುಗುಳ್ನಗುತ್ತೇವೆ.
ನಮ್ಮ ಜನಕ್ಕೆ
ಮಾತಾಡಲೂ ಏನೂ ಇಲ್ಲ.
*****
ಮೂಲ: ವಿಸ್ಲಾವಾ ಝ್ಯಿಂಬ್ರೊಸ್ಕ