ಕವಿಯೆಂದರೆ
ಪದ್ಯಗಳನ್ನು ಬರೆಯುವವನು, ಪದ್ಯಗಳನ್ನು ಬರೆಯದವನು.
ಬಂಧನವನ್ನು ಮುರಿದವನು, ತನ್ನನ್ನೆ ಬಂಧಿಸಿಕೊಂಡವನು.
ನಂಬುವವನು, ನಂಬಲಾರದವನು.
ಸುಳ್ಳು ಹೇಳಿದವನು, ಸುಳ್ಳಿಗೆ ಗುರಿಯಾದವನು.
ಜಾರ-ಬಲ್ಲವನು, ಮತ್ತೆ
ಮತ್ತೆ ಎದ್ದು ನಿಲ್ಲಬಲ್ಲವನು.
ಕವಿಯೆಂದರೆ ಸಾಯಲು ಸಿದ್ಧನಾದವನು,
ಸಾಯಲಾರದವನು.
*****
ಮೂಲ: ಟಾಡೆಯೂಸ್ ರೊಸೆವಿಕ್ಸ್