ನಾನೇನೋ ಹೇಳಿದೆ
ಬಹುಶ: ನೀನು ಕೇಳಿಸಿಕೊಳ್ಳಲಿಲ್ಲ ನೀ
ನನ್ನ ಹುಡುಗತನ ಕಸಿಯಬಹುದು
ಆದರೆ ನನ್ನ ಹುಡುಗಾಟವನು ಅಲ್ಲ
ಪ್ರತಿ ಮಾತಿಗೊಂದು ಉತ್ತರವಿರಲಾರದು,
ಪ್ರತಿ ಒಲವಿನ ಸಂಗತಿ ಕೆಟ್ಟದೇನೂ ಅಲ್ಲ.
ಹೀಗೆ ಕುಡಿದು, ನಶೆಯಲಿ ಓಲಾಡುವೆನು
ಆದರೆ ಪ್ರತಿ ನಶಾ ,ಶರಾಬಿನಿಂದೇನೂ ಅಲ್ಲ.
ಮೌನ ಮುಖದ ಮೇಲೆ ಗಸ್ತು ಸಾವಿರರಾರು
ನಗುಮಖದ ಕಣ್ಣಿನ ಗಾಯ ಅಳವೂ ಹೌದು
ಯಾರ ಜೊತೆ ನಮಗೆ ಆಗಾಗ ಕೋಪ ತಾಪವೋ
ಅವರ ಸಂಬಂಧವೇ ನಮ್ಮೊಂದಿಗೆ ಆಳ ಗಾಢ
ಯಾರೋ ದೇವರಲಿ ವರ ಬೇಡಿದರಂತೆ
ಸಾವು ಬರಲಿ ಎನ್ನುವ ವರವಂತೆ,
ದೇವರೆಂದ, ಸಾವು ನಿನಗೆ ಕೊಡುವೆ ಆದರೆ
ನಿನ್ನ ಜೀವ ಉಳಿಸೆಂದು ವರ ಕೇಳಿರುವರು
ಏನು ಹೇಳಲಿ ಹೇಳು ?
ಪ್ರತಿ ಮಾನವನ ಮನ ಕೆಟ್ಟದೇನೂ ಅಲ್ಲ
ಪ್ರತಿ ಮಾನವ ಸಹ ಕೆಟ್ಟವ ಹೇಗಾದಾನು,
ದೀಪ ಒಮ್ಮೊಮ್ಮೆ ಶಾಂತವಾದರೆ, ತೈಲದ ಕೊರತೆ,
ಪ್ರತಿ ಬಾರಿ ದೋಷ ಗಾಳಿಯದಂತು ಅಲ್ಲವೇ ಅಲ್ಲ !
*****
ಹಿಂದಿ ಮೂಲ : ಗುಲ್ಜಾರ