ಪುಟಿದೇಳುವ ರಾಗದುಸಿರ

ಪುಟಿದೇಳುವ ರಾಗದುಸಿರ
ಭಾವದೆಳೆಯ ಮಧುರ ಭಾಷೆ
ನಮ್ಮ ಭಾಷೆ ಕನ್ನಡ ಭಾಷೆ ||

ಹಸಿರಾಗಿಹ ನೆಲದನುಭಾವ
ತುಂಬಿ ಕಂಪ ಬೀರುವ ಭಾಷೆ
ನಮ್ಮ ಭಾಷೆ ಕನ್ನಡ ಭಾಷೆ ||

ಸದ್ವಿಚಾರ ತಾಳದಗಲ
ಮಾನಭಿಮಾನದಿಂ ಮೆರೆದ ಭಾಷೆ
ನಮ್ಮ ಭಾಷೆ ಕನ್ನಡ ಭಾಷೆ ||

ಕಲೆಯದನುರಾಗಲತೆಯಲಿ
ಅರಳಿ ಹೂನಗೆ ಚೆಲ್ಲುವ ಭಾಷೆ
ನಮ್ಮ ಭಾಷೆ ಕನ್ನಡ ಭಾಷೆ ||

ತ್ಯಾಗ, ಶೀಲ, ಸಂಸ್ಕೃತಿಯ
ಗತ ವೈಭವ ಸಾರುವ ಭಾಷೆ
ನಮ್ಮ ಭಾಷೆ ಕನ್ನಡ ಭಾಷೆ ||

ಮಮತೆ ತಾಯ್ ಮಡಿಲ
ಕಂದನ ತೊದಲ್ನುಡಿಯ ಭಾಷೆ
ನಮ್ಮ ಭಾಷೆ ಕನ್ನಡ ಭಾಷೆ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೂರವಾಣಿ
Next post ನನ್ನ ತಂದೆ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…