ನೈಜ ಶಿಲ್ಪಿ, ಸತ್ಯ ಕಲ್ಪಿ, ನಿಜಾತ್ಮ ರಕ್ಷಿ
ನಿತ್ಯ ಶಿವನು ಸತ್ವ ಪೂರ್ಣನು
ನ್ಯಾಯ ನಡೆಯ ಸ್ಥಿತಪ್ರಜ್ಞ ನಿಷ್ಕಲ್ಮಷಿ
ಜ್ಞಾನ ಜಲಕಲಾಸಿ ವಿರಕ್ತನು
ನ್ಯಕ್ಷ ವೃಕ್ಷ ಬೀಜ ನೆಡದ ಸೊಗಸು ರೂಪಿ
ಜಾಢ್ಯ ತಿಮಿರ ಹೊದಿಕೆ ಅಳಿದ ವೀರನು
ವೈರವಳಿದು ವಿಮಲನಾಗಿ ನಡೆವ ನ್ಯಾಯ ನೋಂಪಿ
ಸತ್ಯ ಪುಂಗವ ಶಿವನ ಕಂಠಃ ಹಾರನು
ಕಾಮ ಚ್ಯುರುಚಿ, ಮಾಯ ಮುಸುಕು ಮೀರಿ ನಿಂದನು
ಮಿಥ್ಯ ಚೂರ್ಣಗೈದ ಚಲುವ ಚನ್ನೈದಿಲೆ
ನಿತ್ಯ ಶಕ್ತಿ ಪಂಜು ಹಿಡಿದ ಜ್ಯೋತಿ ಕಾಯನು
ನ್ಯಾಯ ನೋಂಪಿ ನಡೆವ ನಕ್ಷತ್ರ ಮಾಲೆ
*****