ಓಡುತಿದೆ ನೋಡಲ್ಲಿ ಎನಗಿಂತ ಮೊದಲಾಗಿ
ಕಣ್ಣಿನೋಟಕೂ ಕಡೆಯಾಗಿ, ಮನದೊಟಕೂ ಮಿಗಿಲಾಗಿ
ಮನಮುಗಿಲ ಒಡಲಿನಾಚೆಗೆ ಹೋಗಿ
ನಿಂತು ನಿಲ್ಲದಲೆ, ಕಂಡು ಕಾಣದ, ಮಿನುಗು ತಾರೆಯಾಗಿ
ಸೌಂದರ್ಯ ಲಾವಣ್ಯ ರೂಪ ಯಾವನವೋ
ಕಂಠಕೋಗಿಲವಾಗಿ, ನವಿಲ ಚಲುವಾಗಿ, ಅಣಿಲು ಕುಣಿತಾಗಿ .
ರುಚಿಯ ರಸವಾಗಿ ಪಕ್ಷ ಚಲುವ ಮಾವೋ
ಇನ್ನು ಎನಿತು ಲೀಲಾ ನಾಟ್ಯ ಬೆಡಗು ಬಿನ್ನಾಣವಾಗಿ
ಉರಿಗೆ ನೆರಳಾಗಿ, ತೃಪೆಗೆ ಪಾನೀಯವಾಗಿ
ಕಾಮ ಬಾಣದ ರತಿಯಾಗಿ ಹರ್ಷವರ್ಷವಾಗಿಹುದು
ಉಬ್ಬಿದಾ ಗೊನೆಯಾಗಿ ಕುಸುಮದೆಸಳಾಗಿ
ಸೊಗಸು ಜಾಲ ಹೆಣೆಗೆ ಉಲ್ಲಾಸ ಉಯ್ಯಾಲೆಯಹುದು
ಕರೆದಿಹುದು ಕೈ ಮಾಡಿ ಓ ಮಾಯ ಬಿನ್ನಾಣ!
ಸರ್ಗಮರೆ ಸರ್ಗವೋ? ಸವಿಯ ಮರೆಯಿಹ ನರಕವೋ ?
ಅರಿಯಲಾರದು ತನುವ ಈ ಮಾಯ ಬಿನ್ನಾಣ
ನೈಜವೋ; ಗರ್ಭ ಒಡಲ ವಿಷವೋ; ತಿಳಿಯದೇನೆಲವೋ
*****