ಕಲ್ಲು ಕರಗುವಂಥ ಮನಸು ನನ್ನದಿರಲೊ ದೇವ
ಸಲ್ಲುತಿರಲಿ ನಿನಗೆ ಎನ್ನ ಮೂಢಬಕುತಿ ಭಾವ
ಕುಸುಮದಂತೆ ಅರಳಿ ನಾನು ನಕ್ಕುನಲಿಯಬೇಕು
ಭೃಂಗದಂತೆ ನಿನ್ನಸುತ್ತಿ ಮಧುವ ಸವಿಯಬೇಕು
ತುಂಬಿ ಹರಿವ ಗಂಗೆಯಂತೆ ಘನವು ಮೂಡಬೇಕು
ಅಂಬಿಗ ತಾ ಸಾಗುವಂತೆ ಮನವು ತೇಲಬೇಕು
ಕಳಿತ ಫಲಗಳಂತೆ ನಾನು ಪಕ್ವಗಾಗಬೇಕು
ನವಿಲಿನಂತೆ ಕೂಗಿ ಆಡಿ ಕೇಕೆ ಹೊಡೆಯಬೇಕು
ಹಕ್ಕಿಮರಿಯ ಸಲಹುವಂತೆ ನನ್ನ ಸಲಹೊ ದೇವ
ದಿಕ್ಕು ತಪ್ಪಿ ಹರಿಯುತಿಹುದು ಜನಕಜೆಯ ಭಾವ
*****