ಸ್ವಚ್ಚಂದ ಬೆಳಕಿನಲಿ
ಅಟ್ಟ ಅಡುಗೆಯ ಉಂಡು
ಆಕಾಶ ಭೂಮಿಗಳೇ
ನೆಲ ಮಾಡುಗೊಂಡು
ನಾಳೆ ಎಂಬುದ ಮರೆತು
ಇಂದಿಂದೆ ಬದುಕುವರು
ಅಲೆಮಾರಿ ಜನರು
ಚಿಂತೆಯಂಬ ಬೊಂತೆಗೆ
ಒಂದೊಂದು ಗುಂಡು
ಗೋಲಿಯ ಹೊಡೆದು
ತಣ್ಣೆಯನ್ನಕ್ಕೆ ಉಪ್ಪು
ಮೆಣಸು ನುರಿದು
ದಿನ ದಿನವೂ ಹೊಸ
ರುಚಿ ಹಿಂಜಿ ಅರೆದು
ಅಂದದಲಿ ಕೂಡಿಹರು
ಜೋಪಡಿಯ ಜನರು
ರಟ್ಟೆ ಗುಟ್ಟನ್ನು ಅರಿತು
ಕರ್ಮ ತತ್ವದಿ ಬೆರೆತು
ಸುಖ ದುಃಖ ಸಹಿಸಿ
ಸಹಿ ಕಹಿಯ ಬೆರೆಸಿ
ಹಂಗಿನಾಳಗದೆ ಹಿಗ್ಗಿ
ಸಂತೃಪ್ತ ಸಾಧಕರು
ಶ್ರಮಿಕ ಜನರು
ಮೆರೆದ ಮೊರೆತದ ನಡುವೆ
ಬೇಕು ಬಿಸಾತಿಲ್ಲದೇ ಕುಣಿದು
ಅಂಕೆ-ಶಂಕೆಗಳೇ ಸತ್ತು
ಕಳಂಕಗಳ ಕೊಳೆ ಹೊತ್ತು
ಹಂಸತೂಲಿಕಾ ತಲ್ಪದಲ್ಲೂ
ಹವಣಿಸಿ ನಿದ್ದೆಗೆ
ಕಂಗೆಟ್ಟು ಕೂಗಿಹರು
ಮಹಡಿಯಲ್ಲಿನ ಜನರು
*****