ಮನೆಯ ಮುಂದೆ ಒಂದು ಪುಟ್ಟ ತೋಟ ಮಾಡಿದೆ ಹೂವು ಹಣ್ಣು ಗಿಡವನೆಟ್ಟು ಅಂದ ಗೊಳಿಸಿದೆ ನಿತ್ಯ ನೀರು ಹನಿಸಿ ನಾನು ಹಸನು ಮಾಡಿದೆ ಹೂವು ಬಿಟ್ಟು ಕಾಯಿ ಕೊಟ್ಟು ಗಿಡವು ನಕ್ಕವು ಪೂಜೆಗೆಂದು ಅಮ್ಮ ಬಂದು ಹೂವು ಒಯ್ದಳು ಮುಡಿಯಲಿಕ್ಕೆ ತಂಗಿ ಬಂದು ಹೂವು ಕಿ...

ಅದು ಕೋಟೆಯಂತೆ ಕಟ್ಟಿದ ಗೋಡೆ ದಪ್ಪ ದಪ್ಪ ಕಪ್ಪು ಕಲ್ಲಿನ ಕೋಟೆ ಗೋಡೆಯಾಚೆಗೆ ಸ್ವಚ್ಛಂದ ಪಾರಿವಾಳ ಗೋಡೆಗಳ ಮಧ್ಯ ನಾನು ಸಮಾಧಿ. ಬದುಕು ಕಬ್ಬಿಣದ ಕಠಿಣ ಹಾದಿ ಹಿಮಾಲಯದ ಹಿಮನೀರು ನಾನಾದರೆ ಬಿಸಿನೀರ ಬುಗ್ಗೆಯಂತೆ ಕುದಿವ ನೀರವನು ಕಿಲುಬುಗಟ್ಟಿದ ಸಂ...

ನಿಂತಿವೆ ಬಿಂಬಗಳು ತಿರುವು ತಿರುವುಗಳಲ್ಲಿ ನೆಟ್ಟ ನೋಟಗಳಲ್ಲಿ ಯುಗ ಯುಗಗಳಲ್ಲೂ ಯಾರಿಗೊ ಕಾಯುತ್ತಿವೆ ದಾರಿ ನೋಡುತ್ತಿವೆ ಬರಬೇಕಾದವರಿನ್ನೂ ಬಂದಿಲ್ಲವೇ ಯಾವ ದೇವರ ಶಾಪ ಇವು ಹೀಗೇ ಇರಬೇಕೆ ಬಿಡುಗಣ್ಣುಗಳ ಕ್ಷಣವೂ ಮುಚ್ಚಲಾರವೇ ಮುಚ್ಚಿದರೆ ಮರೆವಿನ...

ರಾಘವೇಂದ್ರ ಗದಗ್‌ಕರ್ ಅವರು ಬೆಂಗಳೂರಿನಲ್ಲಿ ಹುಟ್ಟಿದವರು ಅಪ್ಪಟ ಕನ್ನಡಿಗರೆಂಬ ಅಭಿಮಾನ. ಇವರೊಬ್ಬ ವಿಜ್ಞಾನಿ. ರಾಷ್ಟ್ರೀಯ ಅಂತರರಾಷ್ಟ್ರೀಯ ವಿಜ್ಞಾನಿ. ಭವ್ಯ ಭಾರತದ ಸಮಾಜ ಜೀವ ವಿಜ್ಞಾನಿಯೆಂದೇ ಖ್ಯಾತನಾಮರು. ಇವರು- ಈಗ ಸದಸ್ಯ ಸೆಂಟರ್‌ ಫಾರ್...

ಅಂಕ ಬಂಕಽದೆವನ| ಟೊಂಕಿನ ಮ್ಯಾಲ ಕೈಽಯಿಟ್ಟು | ಡೊಂಕಽ ನಿಂತಾನ ಇವನ್ಯಾರ| ಕೋಲೆಣ್ಣ ಕೋಲ ||೧|| ಅವ ನನ್ನ ಅಽಣ್ಣನ| ಅವ ನನ್ನ ತಽಮ್ಮನ| ಅವ ನನ್ನ ಊರ ಒಡಿಯಽನ| ಕೋ ||೨|| ಅವಽ ನನ್ನ ಊರ| ಒಡಿಯಽನ ನನ್ನ ಮಗಳ| ಅವನಿಽಗಿ ನಿನಗ ಕೊಡತೀನ| ಕೋ ||೩|| ನ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....