ಪ್ರೀತಿಸುವವರ ಕಂಡು

ಪ್ರೀತಿಸುವವರ ಕಂಡು ಮೃಗಗಳಾಗ ಬೇಡಿ| ಪ್ರೇಮಿಗಳ ಹೃದಯ ನೋಯಿಸಬೇಡಿ| ನಿಮಗೂ ಹೃದಯವಿದೆ ಎಂದು ತಿಳಿದು ಪ್ರೀತಿಸುತಿರುವೆವು ನಾವು|| ಲೋಕದ ಅಂತರಗಳ ಅರಿಯದೆ ಪ್ರೀತಿಸುವೆವು ನಾವು| ಸಮಾನ ಹೃದಯಿಗಳಾದ ನಾವು ಜಗದ ಅಹಂ ಅಂತಸ್ತುಗಳ ಅರಿಯೆವು|...

ನಮ್ಮ ಜೀವ ನಮಗೆ ಬಿಡಿ

ಹೊಟ್ಟೆಗಂತೂ ಕೂಳು ಇಲ್ಲ ಬಟ್ಟೆಯಂತೂ ಸಿಕ್ಕಲಿಲ್ಲ ಬಾಳಿಗಂತೂ ಬಾಯಿಯಿಲ್ಲ ನಮ್ಮ ನೋವು ಮೀಟಲಿಲ್ಲ. ನಮ್ಮ ಜೀವ ನಮಗೆ ಬಿಡಿ ಬದುಕಲಿಷ್ಟು ಕಾಲ ಕೊಡಿ. ಮುಖದ ತುಂಬ ಜೇಡ ಬಲೆ ನಡೆವ ಬೀದಿ ನಮ್ಮ ನೆಲೆ...
ಶ್ರೇಷ್ಠತೆಯ ಸವಾರಿ

ಶ್ರೇಷ್ಠತೆಯ ಸವಾರಿ

ಶ್ರೇಷ್ಠತೆಯ ಕಲ್ಪನೆ ಮನುಷ್ಯನಿಗೆ ಎಲ್ಲಿಂದ, ಯಾಕೆ ಬರುತ್ತದೆ ಎನ್ನುವುದೇ ಒಂದು ಸೋಜಿಗದ ವಿಷಯ. ಜರ್ಮನ್ ರಕ್ತವೇ ಶ್ರೇಷ್ಠವೆಂದು ಯಹೂದಿಗಳನ್ನು ಕೊಂದ ಹಿಟ್ಲರಿನಿಗಾಗಲಿ, ದಶಕಗಳ ಕಾಲ ಕಪ್ಪು ಜನರ ಮೇಲೆ ವಿಷಯವನ್ನು ಮೆರೆದ ಬಿಳಿಯರಿಗಾಗಲಿ, ಪ್ರಪಂಚ...

ಕವಿ

ಸೌಂದರ್‍ಯಸರಸಿಯೊಳು ಕವನೀಯ ಸುಕುಮಾರ ಸಿರಿರಾಜಹಂಸವಾಗಿ ಇಂದು ಮೂಜಗ ಮೀರಿ ಅವರ ಗದ್ದುಗೆ ಏರಿ ಆಳ್ವ ಅಧಿಕಾರಿಯಾಗಿ ಋತುರಾಜ ನವತರುಣ ಮಧುವನದ ಅಭಿರಾಮ ಮೃದು ಮಂದವಾಯುವಾಗಿ ಅತಿರೂಪಲಾವಣ್ಯ ಅರೆದೆರೆದು ಬಿರಿಬಿರಿದ ಅರಳು ಹೂದುಂಬಿಯಾಗಿ ಸುರಗಂಗೆ ತೆರೆಯಾಗಿ...

ಅಕ್ಷರ ಹಾರದ ಮುತ್ತುಗಳು

ಚದುರಿ ಹೋದ ಮುತ್ತುಗಳು ಒಟ್ಟುಗೂಡಿವೆ ಒಂದೆ ಬಣ್ಣ ಅಂಗಿತೊಟ್ಟು ಶಾಲೆಗ್ಹೊರಟಿವೆ ಬಾಡಿಹೋದ ಮೊಗದಲೀಗ ನಗೆಯು ಉಕ್ಕಿದೆ ಪಾಠಕಲಿಯುವತ್ತ ಅವರ ಮನವು ಹೊರಳಿದೆ ಕೂಲಿಯಿಂದ ಮುಕ್ತರಾಗಿ ಬಂದುಬಿಟ್ಟರು ಆಟಪಾಠ ಎಲ್ಲವನ್ನು ಕಲಿತು ನಲಿದರು ಶಾಲೆ ಬಯಲಲೀಗ...

ಸೂರುಕೊಡಿ

ಕಲ್ಲು ದೇವರಿಗೆಂದು ಗುಡಿ ಗುಂಡಾರಗಳ ಕಟ್ಟಿಸುವವರೇ ಕೊರೆವ ಚಳಿ, ಮಳೆ, ಬಿರಗಾಳಿಗೆ ಗುಡುಗು ಸಿಡಿಲು ಮಿಂಚಿಗೆ ಬರಿಮೈಯನ್ನೊಪ್ಪಿಸಿ, ಗಡಗಡನೆ ನಡುಗುವ ನಿಮ್ಮವರ ತಲೆಯ ಮೇಲೊಂದು ಸೂರುಕಟ್ಟಿಸಿ ಕೊಡಿ. *****

ಮಾತುಮಾತಿಗೆ

ಮಾತುಮಾತಿಗೆ ಸಿಟ್ಟುಮಾಡಿದಿರಿ ಪಾತ್ರೆ ಪಗಡೆಗಳ ಒಡೆದುಹಾಕಿದಿರಿ ಕಂಡಕಂಡವರಿಗೆ ಕೆಂಡವಾದಿರಿ ಸಿಟ್ಟು ನಾಶಕೆ ಮೂಲವೆಂದ ನಮ್ಮ ಬುದ್ಧನ ಕೇಳಿದಿರ ಅದು ಬೇಕು ಇದು ಬೇಕು ಎಲ್ಲ ಬೇಕೆಂದಿರಿ ಎಷ್ಟು ದೊರಕಿದರು ಇನ್ನಷ್ಟು ಬೇಕೆಂದಿರಿ ಸಾಕೆಂಬ ಪದವನ್ನೆ...

ಕಹಿಸಿಹಿ ಕತೆ

ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ವಿಜಯನಗರ ಸಾಮ್ರಾಜ್ಯ ಆರಂಭದಲ್ಲೇ ಉತ್ತರ ಭಾರತದ ಕಳಿಂಗ ದೇಶದವರೆಗೂ ಸಿದ್ಧಿ ಪ್ರಸಿದ್ಧಿ ಹೊಂದಿತ್ತು! ವಿಜಯನಗರ ಸಾಮ್ರಾಜ್ಯವನ್ನು ತೌಳವ ನರಸನಾಯಕ ಅಳುತ್ತಿದ್ದ. "ಅಧಾರ್ಮಿಕರಾದ ಮಹಾರಾಜರು ಎಂದೂ ಶ್ರೇಯಸ್ಸು ಹೊಂದಲಾರರು" ಎಂಬ...

ನಗೆ

ಹಾಲಿನ ರುಚಿಯಿಲ್ಲ ಮೊಸರಿಗೆ ಮೊಸರಿನ ರುಚಿಯಿಲ್ಲ ಮಜ್ಜಿಗೆಗೆ ಮಜ್ಜಿಗೆಯ ರುಚಿಯಿಲ್ಲ ಬೆಣ್ಣೆಗೆ ಬೆಣ್ಣೆಯ ರುಚಿಯಿಲ್ಲ ತುಪ್ಪಕ್ಕೆ ದಿನ ಒಂದರಲ್ಲಿ ರುಚಿಗಳ ಹಲವು ಬಗೆ ಪ್ರತಿ ಹೆಜ್ಜೆಯಲ್ಲು ಕಾಲದ ಕುಹಕ ನಗೆ *****

ಸವೆದರೂ ಚಪ್ಪಲಿ

ಸವೆದರೂ ಚಪ್ಪಲಿ ಎರಡು ಜೊತೆ ಆಗಲಿಲ್ಲ ಕೆಲಸ ಆದರೂ ಇಲ್ಲಿಯ ಅಧಿಕಾರಿಗಳಿಗೆ ಪ್ರಮೋಷನ್ ವಿಲಾಸ ಇದು ತಬರನ ಪ್ರಲಾಪ ಜನಗಳ ಕಲಾಪ //ಪ// ಬಂದರೆ ಯಾವುದೆ ಅರ್ಜಿ ಹುಳ ಹಿಡಿಯುವುದಿಲ್ಲ ಟಿಪ್ಪಣಿ, ಚರ್ಚಿಸಿಗಳಲಿ ಕಡತ...