ಆರು ಗಂಟೇಕ್ಕ ಚಾದಂಗಡಿ ಬಳಗ ಕಾಲಿಡ್ತಾನಽ ಕ್ಯಾಷಿಯರ್ ಬಾಬು ಬಂದು ಸಣ್ಣಗ ನಡಗೋ ದನಿಯಾಗ ಹೇಳಿದ ಮಾತು ಕೇಳ್ತಾನ ಎದಿ ಬಡಬಡಿಸಾಕ ಹತ್ತಿತ್ತು. ಭಯಕ್ಕ ಅಂವ ಬೆಂವತಿದ್ದ. ಮಾತು ತಡವರಿಸಿ ಬರತಿದ್ದವು. ಮೊದಲಿಗೆ ನೋಡ್ತಾನಽ ಏನೋ ಅವಘಡ ಆಗೇದ ಅನಿಸಿತ್ತ...

ಮಗನಿಗೆ ದೊಡ್ಡ ವಹಿವಾಟು ಮುಂಬಯಿಯಲ್ಲಿ ಮಗಳು ಮದುವೆಯಾಗಿ ಮಕ್ಕಳೊಂದಿಗೆ ಕಲ್ಕತ್ತೆಯಲ್ಲಿ ಹಣ್ಣು ಹಣ್ಣು ಮುದುಕ-ಮುದುಕಿ ಸಾಗರದ ಒಂದು ಮೂಲೆ ಚಿಕ್ಕ ಹಳ್ಳಿಯಲ್ಲಿ ದೊಡ್ಡ ಮನೆ- ಮಂಕಾಗಿ ಉರಿಯುವುದು ದೀಪ ಭರವಸೆಯಲ್ಲಿ ಸುಳಿದಾಡುವುದು ನಿರೀಕ್ಷೆಯ ದೆ...

ರಂಗ ಹೀಗ ಅಂತ ಈವರೆಗೂ ಯಾರೂ ಸಷ್ಟ ನಿರ್ಧಾರಕ್ಕೆ ಬಂದಂತಿಲ್ಲ. ಡೀಸೆಂಟ್ ಅಂದುಕೂಂಡಾಗ ಮೋಸ್ಟ್‌ ಡಿಫರೆಂಟ್‌, ಮೇದು ಅಂದುಕೊಂಡರೆ ರಫ್ ಅಂಡ್ ಟಫ್, ಮುಂಗೋಪಿ ಪಟ್ಟ ಕಟ್ಟಿ ದೂರವಿಟ್ಟಾಗ ಅಂತಃಕರಣಿ, ಉಪಕಾರಿ ಅನ್ನುವಾಗಲೇ ಅಹಂಕಾರಿ, ಕೇಡು ಬಯಸದವನಂದ...

ನನ್ನ ಪ್ರೇಮದ ಕಡ ಎಷ್ಟು ದಿನ ಇಟ್ಟುಕೊಳ್ಳುವಿ ನೀ ಬಿದಿರಕೋಲಿನ ಸಖನೇ ನಾಳೆಗಾದರೂ ತೀರಿಸಿಬಿಡು ಹನಿಮುತ್ತಿದ ಕೆಂದಾವರೆಗಳು ನನ್ನ ತುಟಿಯಲ್ಲರಳಲಿ. ಬಿದಿರುಗಣೆ ಉಲಿತ ಸದ್ದಾಗದಂತೆ ನನ್ನಾತ್ಮವನ್ನೆ ಕಬಳಿಸುತ್ತಿದೆ. ಯಮುನೆ ತೀರದ ಕುಳಿರ್‍ಗಾಳಿ ತಣ...

ಪ್ರತಿಯೊಬ್ಬ ಮನುಷ್ಯನೂ ವೈಯಕ್ತಿಕವಾಗಿ ಬಯಸುವುದೇನು? ಸುಖ, ಶಾಂತಿ, ಶ್ರೀಮಂತಿಕೆ, ಆರೋಗ್ಯ? ಊಹೂಂ, ಇವೆಲ್ಲಾ ಸಿಕ್ಕಿಯೂ ಮನ್ನಣೆಯೊಂದು ಸಿಗದಿದ್ದರೆ ವ್ಯರ್ಥವೇ ಸರಿ. ರಾಜಕೀಯವಾಗಿ ಪ್ರಜಾಪ್ರಭುತ್ವ ಎಲ್ಲೆಡೆ ಬಂದು ಸಮಾನತೆ ನೆಲಸಿದ ಮೇಲೂ ವ್ಯಕ್ತ...

ಎಲ್ಲ ಮುಗಿದ ಮೇಲೆ ಅವಳನ್ನು ಮಣ್ಣಿಗಿಟ್ಟರು. ಹೂ ಬೆಳೆದವು, ಚಿಟ್ಟೆ ಹಾರಿದವು ಅಲ್ಲಿ. ಹೆಣ ಮಣ್ಣಿಗಿಟ್ಟಾಗ ಗುರುತು ಕೂಡ ಬೀಳಲಿಲ್ಲ. ಅಷ್ಟು ಹಗುರವಾಗಲು ಅವಳೆಷ್ಟು ನೋವು ತಿಂದಿದ್ದಳೋ! ***** ಮೂಲ: ಬೆರ್ಟಾಲ್ಟ್ ಬ್ರೆಖ್ಟ್ / Bertolt Brecht...

ಕಳ್ಳ ನೋಟ ಬೀರಿ ಎನ್ನ ಮನವ ಕದ್ದವ ಎಲ್ಲಿಹ ಹೇಳೆ! ಸಖಿ || ಇರುಳು ಮರಳಿತು ಚಂದ್ರಮ ಬಂದನು ನೀನೇ ಪುಣ್ಯವತಿ ಚಕೋರಿ || ಚಂದ್ರಮ ನಿನಗಾಗಿ ಪ್ರೀತಿ ಬೆಳದಿಂಗಳಾಗಿ ಮುತ್ತನಿತ್ತನೇ ನೀನೇ ಪುಣ್ಯವತಿ || ವಿರಹದ ಬೇಗೆಯಲಿ ರಾಧೆ ನಾ ಒಂಟಿಯಾದೆ ಶ್ಯಾಮ ಬ...

ಈಚೆಗೆ ಯಾಕೋ ತುಂಬ ಸಣ್ಣಗಾಗಿದ್ದೀರಿ ಅಂತ ಗೆಳೆಯರು ಪರಿಚಿತರೆಲ್ಲ ಹೇಳಲು ಶುರುಮಾಡಿದರು. ನನಗೇನಾಗಿದೆ ಧಾಡಿ ಧಾಂಡಿಗನಂತಿದ್ದೀನಿ – ಆಂತಾ ದಿನಾ ಹೇಳಿ ಹೇಳಿ ಬಾಯಿ ಒಣಗಿ ಹೋಯಿತು. ಮೊನ್ನೆ ಇವಳೂ ಒಮ್ಮೆ ಮೆಲ್ಲಗೆ ಹತ್ತಿರ ಬಂದು “ಯಾ...

1234...9

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...