
ಮಣ್ಣಿನೊಳಗಕಟ! ನಾಮಿಳಿಯುವಂದಿನ ಮುನ್ನ ಇನ್ನು ಮುಳಿದಿಹ ದಿನವ ಬರಿದೆ ನೀಗುವುದೇಂ. ಮಣ್ಣೊಳಗೆ ಮಣ್ಣಾಗಿ ಮಣ್ಣೊಡನೆ ಬೆರೆವುದೇಂ ಮಧು ಗೀತ ಸತಿ ಗತಿಗಳೊಂದನರಿಯದೆಯೆ? *****...
ಸಾವಿರ ಮುನಿಸುಗಳು ಸುಳಿದರೂ ಸರಿಯದಿರಲಿ ಒಲವು ಕರಗದಿರಲಿ ನಲಿವು *****...
ಹಾ! ಪ್ರಿಯಳೆ, ಬಾ; ಇಂದಿನಿಂ ಹಿಂದಿನಳಲುಗಳ ಮುಂದಿನಳುಕುಗಳ ತೊಲಗಿಸುವ ಬಟ್ಟಲನು ತುಂಬಿ ನೀಡೆನಗೀಗ; “ನಾಳೆ”ಯೆಂಬೆಯೊ?-ನಾಳೆ ಸೇರುವೆನು ನೂರ್ಕೊಟಿ ನಿನ್ನೆಗಳ ಜೊತೆಗೆ. *****...
ದಿಕ್ಕು ತಪ್ಪುವುದೇ ಬದುಕೆಂದು ನಂಬಿದವನಿಗೆ ನಿನ್ನ ಪ್ರೀತಿಯೇ ದಿಕ್ಕು *****...
ಪುಣ್ಯಗಳನಾರ್ಜಿಸಿದೆವೆಂಬ ಘನ ಚರಿತರುಂ ಪತಿತರೆನ್ನಂತೆನಿಪ್ಪಲ್ಪ ಜಂತುಗಳುಂ ಮಣ್ಣ ಹರದೊಂದೆ ತೆರದಲಿ ಬಳಿಕ ಜನರಾರು ಮಾ ಗೋರಿಗಳ ತೆರೆಯರವರ ದರ್ಶನಕೆ. *****...
ರಾತ್ರಿ ಸುರಿದ ಮಂಜಿನ ಮಳೆಯಲ್ಲಿ ನಡುಗುತ್ತ ನಾನೊಬ್ಬನೇ ನೆನೆದೆ ಅವಳು ಬೆಚ್ಚಗೆ ಮಲಗಿದ್ದಳು… ಹಸಿ ಕನಸುಗಳ ಮಡಿಲಲ್ಲಿ *****...
ಮರೆಯದಿರು ; ನಮ್ಮ ಪೂರ್ವಿಕರು, ಸಂಮಾನಿತರು, ಕಾಲ ವಿಧಿಗಳವರ್ಗೆ ಪೇಯಗಳ ನೀಯೆ, ಸಂದನಿತನಾದರದಿ ಕುಡಿ ಕುಡಿದು ಬೇಡೆನದೆ, ಅದು ಮುಗಿಯೆ, ಮೈದಣಿಯೆ, ಮಲಗಿ ಬಾಯ್ಬಿಗಿದರ್. *****...
ಒಬ್ಬನೆ ನಿಂತ ದಾರಿ ಬದಿಯಲ್ಲಿ ಕೈ ಬೀಸಿ ಕರೆಯುತ್ತಿರುವ ಅವಳು… ಹೆಪ್ಪುಗಟ್ಟಿದ ನೋವು ಈಗೀಗ ಕರಗುವಂತೆ ನಟಿಸುತ್ತಿದೆ *****...
ಜಾಂಷೆದನು ಹಿಗ್ಗಿ ಮೆರೆಯುತ್ತಿದ್ದ ಮಂಟಪದಿ ಹಲ್ಲಿ ಹೆಗ್ಗಣಗಳಿಂದೆಸೆವುವೋಲಗದಿ! ಮಲಗಿ ಬೈರಾಮ ವೀರನು ನಿದ್ರಿಸಿರ್ಪಲ್ಲಿ ಕಾಡುಕತ್ತೆಗಳವನ ತಲೆಯ ತುಳಿಯುವುವು! *****...
೨೧ ತುಂಬಿದರೂ ಯಾವ ಹುಡುಗಿಯ ಕಣ್ಣಿಗೂ ವಿಶೇಷವಾಗಿ ಕಾಣದ ನನ್ನ ಕುರಿತು ನನ್ನದೇ ಕಣ್ಣಿಗೆ ಅನುಕಂಪವಿದೆ *****...













