
ಯಾವುದು ಸಿಹಿಯೋ ಯಾವುದು ಕಹಿಯೋ ನೀನಿಲ್ಲದೆ ರುಚಿ ಎಲ್ಲಿ? ಯಾವುದು ಸ್ವರವೋ, ಯಾವುಮ ಶ್ರುತಿಯೋ ನೀನಿಲ್ಲದೆ ಅರಿವೆಲ್ಲಿ? ಸುತ್ತ ಇದ್ದರೂ ನದಿ ವನ ಕಾಡು ಆ ಚೆಲುವಿಗೆ ನಾ ಕುರುಡ; ನೀನಿದ್ದರೆ ಮರುಭೂಮಿಯಾದರೂ ಅಮೃತಕೆ ಹಾರುವ ಗರುಡ. ಎಲ್ಲಿದೆ ರುಚಿ...
ನೀನಿಲ್ದೆ ಸಂಪತ್ತು ಶವದಲಂಕಾರಾ ನೀನಿದ್ರೆ ಸುಡುಗಾಡು ಅರಮನೆಯಾಕಾರ ||ಪ|| ನೀನಿಲ್ಲೆ ತಣ್ಣೀರ ಬಾವೀಲಿ ಮುಳುಗಿದರು ಕುದಿವಂಥ ಎದೆಗುದಿ ಒಳಹೊರಗ ನೀನಿದ್ರೆ ಬಿಸಿಲಿನ ಬೇಗೆಯ ಬೆವರೂ ತಣ್ಣೀರ ಸ್ನಾನವು ಏನ್ ಬೆರಗ ||೧|| ನೀನಿದ್ರೆ ತುಂಬಿದ ಮನೆಯ...
ತಾಗದಿರಲಿ ಮುನಿಯ ಕೋಪ* ಕಾಡದಿರಲಿ ಶಾಪ ಕಾಯುತಿರುವ ಪ್ರೇಮಿಯ ತೋಳಿನಲ್ಲಿ ಬೀಳು ನಲ್ಲನೆದೆಯ ಕಂಪಿಸುವ ಮೊಲ್ಲೆಯಾಗಿ ಏಳು ಕಾsಳಾಗಿ ಹೋsಳಾಗಿ ಮುಚ್ಚಿ ಬಿಚ್ಚಿ ಆಡು ಮೇವಾಗಿ ಮೊಗೆಯಾಗಿ ದಾಹಗಳಿಗೆ ಊಡು ಪ್ರಿಯನ ಬಯಕೆಯುತ್ಸವಕೆ ಕಳಶಗಳನು ನೀಡು ಅವನಾಸ...
ಕರೆಯೂ ಬಂದದ ಕಾಣೇ ಅವ್ವ ಕೇಳು ಬಾರೆ ಕೇಳೆ ಅವ್ವ ಮಲಗಿದವನ ಎಬ್ಬಿಸಿ ಬಿಡ್ತು ಕುಂತಿರುವವನ ಕುಲುಕಿ ಬಿಡ್ತು ನಿಂತಿರುವವನ ಏರಿಸಿ ಬಿಡ್ತು ಏರಿಹಾರಿ ಕುಣಿವಂಗಾಯ್ತು ಯಾವುದೋ ಲೋಕದಾಗ ಸುತ್ತಿದಂಗಾಯ್ತು ಯಾವ್ದೊ ಸೀಮೇ ಸೇರಿದಂಗಾಯ್ತು ಯಾವುದೋ ಜೇ...
ನಿನ್ನ ಕನಸುಗಳಲ್ಲಿ ಮುಳುಗಿಹೋದೆನು ನಾನು ಎತ್ತಿ ಕಾಪಾಡುವರು ಯಾರು? ಸವೆನೆನಪಿನಾಳದಲಿ ಹುಗಿಮ ಹೋಗಿರುವೆನು ಅಗೆದು ತೆಗೆಯುವರಿಲ್ಲವೇನು? ನಿನ್ನ ಬಯಕೆಯ ಗಾಳಿ ಹಾರಿಸಿತು ನನ್ನ ಹಿಡಿದು ನಿಲ್ಲಿಸುವವರು ಯಾರು? ಕ್ರೂರ ವಿರಹಾಗ್ನಿಯಲಿ ಬೇಯುತಲೆ ಇರು...
ಕಪ್ಪು ಬಣ್ಣದ ಕೃಷ್ಣ ಎಷ್ಟು ಚಂದವೊ ನೀನು! ಕಪ್ಪಿನ ಮಹಿಮೆಯ ತಿಳಿದೆ ಈಗ ಮುಗಿಲಾಳ ಕಡಲಾಳ ಎಲ್ಲ ಕಪ್ಪಲ್ಲವೆ ರತ್ನಗಳಲಿರುವಂತೆ ನೀಲರಾಗ? ಕಪ್ಪ ಮೋಡಗಳೆಲ್ಲ ಒಟ್ಟಾಗಿ ಕೂಡಿವೆ ದಟ್ಟೈಸಿ ನಡುವೆ ಮಿಂಚೆದ್ದಿದೆ, ಕಪ್ಪ ಕೋಗಿಲೆ ದನಿ ಪಂಚಮದಿ ಹೊಮ್ಮಿದೆ...
ನಿನ್ನ ಬರವನೇ ಕಾಯ್ದು ಇರುವೆ ಇರವೆಲ್ಲ ಕಾಯ್ವ ಚಿಂತೆ ಬರದೆ ನೀನು ಬರಡಾದೆ ನಾನು ಬಾಗಿಲನು ತೆರೆದೆ ನಿಂತೆ ಬಣ್ಣ ಬಣ್ಣ ವೇಷಗಳ ತೊಟ್ಟು ಬಯಲಾಟ ಬೊಂಬೆಯಂತೆ ಬಣ್ಣಿಸಿದ್ದೆ ನಾ ಹಿಂದೆ ಅಂತೆಯೇ ಎಲ್ಲ ಅಂತೆ ಕಂತೆ ಜಟೆಕಿರೀಟದಲಿ ನಾಲ್ಕು ಕೈಗಳಲಿ ವ...
ಏತಕೆ ಆಟ ಆಡುವಿ ಭಕ್ತನ ವೇಷ ಹೂಡುವಿ? ಮೈಯ ಮೋಹದ ಕಾಮೀ ಬೆಕ್ಕು ಗುರುಗುಡುತಿದೆ ಒಳಗೆ ಬಿಚ್ಚಿದೆ ಉಗುರ, ಎತ್ತಿದೆ ಪಂಜ ವಿರಾಗಿ ವೇಷ ಹೊರಗೆ ಲೋಭ ಮೋಹಗಳ ಚಿರತೆ, ತೋಳ ತಲೆಯ ಬೋನಿನೊಳಗೆ ಆದರ ಫಳಫಳ ಗೋಪೀ ಚಂದನ ತೋಳಿಗೆ ಎದೆ ಹಣೆಗೆ ಜಪಮಣಿ ಮಾಲೆಯ ನ...













