Home / ಕವನ / ಕವಿತೆ

ಕವಿತೆ

ಜಾತಿಯ ಉರಿಯಾರಲಿ ಕೋಪದ ಧಗೆ ತೀರಲಿ ಧಗಧಗಿಸುವ ದ್ವೇಷದ ಜ್ವಾಲೆ ನಂದಿಹೋಗಲಿ; ತಂಪು ಬೆಳಕ ಚೆಲ್ಲುವ ಚಂದ್ರ ಮೇಲಕೇರಲಿ ಮಕ್ಕಳೆಲ್ಲ ಮನಸು ಕಲೆತು ಮುಂದೆ ಸುಖದಿ ಬಾಳಲಿ. ವಿದ್ಯೆಯೆಂಬ ಗಂಗೆಯಲ್ಲಿ ಮೀಯಲೆಲ್ಲ ಮಕ್ಕಳು, ಸಹನೆಯೆಂಬ ಸುಧೆಯುಣಿಸಲಿ ಜ್ಞಾ...

ದಿನಾಲೂ ನೋಡುತ್ತಲೇ ಇದೆ ಆ ಮಗು ಪಾಪ ನೆಲದೆದೆಯಿಂದ ಆಕಾಶದಂಗಳಕೆ ನೆಗೆಯುವ ವಿಮಾನ ಹಾರಾಡಿ ದೂರ ದೂರ ಸರಿಯುವದ- ನೂರಾರು ಕನಸುಗಳು ಚಿತ್ತದೊಳಗೆ ಹಾರಲು ಹಾತೊರಿಕೆ. ಅನಕ್ಷರ, ಬಡತನ ಅಸಹಾಯಕತೆ ಕಣ್ತುಂಬ ನೀರು ಕೆನ್ನೆ ಕಪ್ಪು ಬಣ್ಣ ಬಣ್ಣದ ಗಾಳಿಪಟ ...

ಬನ್ನಿ ಸಜ್ಜನರೇ ಬನ್ನಿ ನವ ನಾಡ ಕಟ್ಟುವ ಬನ್ನಿ ||ಪ|| ಪ್ರಗತಿ ಬಂಡಾಯ ದಲಿತ ನವೋದಯ ನವ್ಯ ಸಂಪ್ರದ ಶೀಲರೆ ಬನ್ನಿ, ಜ್ಞಾನ ವಿಜ್ಞಾನ ನಿಧಿಯ ವಿಬುಧ ಜನ ಸಮ್ಮಾನ ಜನಪದರೆ ಬನ್ನಿ, ||ಅ.ಪ.|| ಕಬ್ಬಿಗ ಬನದ ಕಾವ್ಯ ರಸದ ಸುಧೆ ಕಳಸ ಹೊತ್ತು ಬನ್ನಿ, ಮಾ...

ದಿನಕ್ಕೊಂದು ಆಟ ಮರದ ತುಂಬ ಮಿಡಿ ಮಿಡಿತದ ಹಕ್ಕಿ ಹಾರಾಟ ಗಾಳಿ ಮಾತು ಹೊಳೆದಾಟಿ ಬೇಲಿದಾಟಿ ಹಿಡಿದ ಚಿಟ್ಟೆ ಕೈಗೆ ಅಂಟದ ಬಣ್ಣಗಳು ಆಚೆ ಕಾಮನ ಬಿಲ್ಲು. ದೊಡ್ಡ ರೆಂಬೆಯ ಹಿಡಿದ ಎಳೆದ ಎಲೆ ಬೆರಳುಗಳು ಚೀಪಿ ಚೀಪಿ ರಸಪಾಕ ಹಕ್ಕಿ ರೆಕ್ಕೆ ತುಂಬ ಹಾರಿದ ...

ಮುಂಬೆಳಗ ಮಂಜಿಗೆ ತೆರೆದ ಪುಟ್ಟ ಕಣ್ಣುಗಳು ರಣ ಮಧ್ಯಾಹ್ನದ ಝಳಕ್ಕೆ ಕರಗಲಿಲ್ಲವೆ? ಮಾನವನ ಕಣ್ಣುಗಳಿಗೆ ಹೆಚ್ಚು ಬೆಳಕು ತಾಳುವ ಶಕ್ತಿಯಿಲ್ಲ ಎಂದೆ? ಕತ್ತಲೆಯಿಂದ ಬಂದೆ ವಾಸ್ತವತೆಗೆ ಅದ್ಭುತದಿಂದ ಸಾಮಾನ್ಯಕ್ಕೆ ಸೌಂದರ್ಯದಿಂದ ಆಕಾರಕ್ಕೆ ತುಟಿಗೆ ತ...

ತೇಲಿ ತೇಲಿ ಹೋಗುತಿಹ ಬೆಳ್ಮುಗಿಲುಗಳೇ ನೀವು ಹೋಗುವಲ್ಲಿಗೆ ಹೊತ್ತು ನಡೆಯಿರಿ ನನ್ನ ಒಂದಿಷ್ಟು ಕನಸುಗಳ ಗಂಟ ನಿಮ್ಮ ಬೆನ್ನಲ್ಲಾದರೂ ಸಾಕಾರವಾಗಲಿ ಭಗ್ನವಾಗುಳಿದ ಕನಸುಗಳ ಅವಶೇಷ ಅಲ್ಲೆಲ್ಲೊ ಒಂದಿಷ್ಟು ಕಾವಿದ್ದರೂ ಇಳಿಸಿಬಿಡಿ, ನನ್ನ ಕನಸುಗಳ ಮೊಟ್...

ಕಳೆದು ಹೋಗಿಹ ಸಣ್ಣ ಕಣ್ಣಿನ ಸೂಜಿ ಹುಡುಕುತ್ತಿದ್ದಾಳೆ ಅರೆಗುರುಡಿನ ಅಜ್ಜಿ ಮೂಲೆ ಮೂಲೆ, ಸಂದಿ ಗೊಂದಿ ತಡವುತ್ತಾ, ಎಡವುತ್ತಾ ಅಸಂಬದ್ಧ ಗೊಣಗುತ್ತಾ ಅಪ್ರಚಲಿತ ಜಾನಪದ ಗೀತೆ ಗುನುಗುತ್ತಾ ಹರಿದ ಸೀರೆ ತುಂಡು ತೇಪೆಗೊಂದಿಷ್ಟು ಅರಿವೆ ಹಿಡಿದು ಮಸುಕ...

ಮೊದಲು ಅವನು ಅದನ್ನು ಕುಡಿದ ಈಗ ಅದು ಅವನನ್ನು ತಿನ್ನುತ್ತಿದೆ ಮಂಜಾವಿಂದ ಸಂಜೆಯವರೆಗೆ ಸಂಜೆಯಿಂದ ಮುಂಜಾವಿನವರೆಗೆ ಸದಾ ಕುಡಿಯುತ್ತಲೇ ಇದ್ದ ಅರ್ಥವಿಲ್ಲದ ಇದನ್ನು ಬಿಡಿಸಲು ಮಾಡಿದ ಹರಸಾಹಸವೆಲ್ಲ ವ್ಯರ್ಥ ಯಾವಾಗಲೋ ಒಮ್ಮೊಮ್ಮೆ ಮನುಷ್ಯ ಬಯಸಬಹುದು...

ಗದಲ ಗೋಜಲು ದೂಳು ದುಮ್ಮು ದುರ್ವಾಸನೆ ಸಿಡಿಮದ್ದುಗಳ ಕಟುನಾತ ಕೊಳಚೆ ಹರಿವ ಓಣಿ ಬೀದಿಗಳು ದಾರಿಯಲ್ಲಿ ಬಿಡಾಡಿ ದನ-ಜನಗಳು ಮುಂದೆ ಸಾಗಲು ಬಿಡದೆ ಅಡ್ಡಾದಿಡ್ಡಿ ನಿಂತು ಮೆಲುಕು ಹಾಕುತ್ತಿವೆ ಸರಭರ ವಾಹನಗಳು ಕಿವಿಕೊರೆಯುತ್ತಿವೆ ಧೂಳೆಬ್ಬಿಸಿ ಮೂಗಿಗ...

ಮೋಡಗಳಿಗೆಲ್ಲಿವೆಯೋ ಕಾಲು ಕುಟುಂಬವೇ ನಡೆಯುತಿಹುದಿಲ್ಲಿ ಅಪ್ಪ ಅಮ್ಮ ಮಕ್ಕಳು ಮೊಮ್ಮಕ್ಕಳು ಸಂಬಂಧಿಗಳು ಒಮ್ಮೆ ವೇಗ ಮಗದೊಮ್ಮೆ ನಿಧಾನ ಒಮ್ಮೆ ಮುನಿಸಿ ದೂರ ದೂರ ಮತ್ತೊಮ್ಮೆ ಸುತ್ತಿ ಒಬ್ಬರೊಳಗೊಬ್ಬರು ತಲೆಯ ಮೇಲೆ ಕಪ್ಪುಬುಟ್ಟಿ ಚಾಪಿ ಬಗಲಿಗೆ ಗಂಟ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...