ನಾಳೀಜಂಘ

ಬಾನ ಗೂಡಾರವನು, ಬೆಟ್ಟ, ನಡುಗೋಲಂತೆ ತುಟ್ಟತುದಿಗೋಪುರದ ಮೇಲೆತ್ತಿ ಹಿಡಿದಂತೆ ನಿಂತಿರಲು ದೂರದೊಳು, ಸುತ್ತ ನಭವಿಳಿದಿರಲು ಸಂಜೆರಂಗಿನ ಮೋಡ ಅದನಂದಗೊಳಿಸಿರಲು, ಸರಸಿಯೊಳು ಝಗಝಗಿಸಿ ರವಿಯ ಛವಿಯಾರುವೊಲು ಹಕ್ಕಿವಿಂಡಿಂಚರಿಸಿ ಮರದೊಳಡಗುತಲಿರಲು, ಬೈಗಿನ ಮಲರ್ವುಡಿಯೊ ಎಂಬ ತೆರ ಕಣಿವೆಯೊಳು...

ಕಾಬೂಲಿವಾಲಾ

ಅಂದು ಬದುಕಿದ್ದೆ ನಾನು ಕಾಬೂಲ್ ಖಂದಹಾರ್‌ನ ಖರ್‍ಜೂರದ ಗಿಡದಂತೆ ಸಿಹಿ ಹುಳಿಯ ಸಂಗಮ ಅಂಗೂರದ ಬಳ್ಳಿಯಂತೆ ಶಾಂತಿ ಕಾಲವೇ ಇರಲಿ ಯುದ್ಧ ಕಾಲವೇ ಬರಲಿ ಬಂದೂಕಿಲ್ಲದ ಬರಿಗೈಯಲಿ ಕಂಡಿಲ್ಲ ಅವನ ಸದಾ ಭಯದ ನೆರಳಿನಲೇ...

ಬೆಳಕಾದ ಬೀಡು

ಯಾವ ಜನ್ಮದ ಪುಣ್ಯವೊ ಏನೊ ನಾನಾಗಿಹೆನು ಕನ್ನಡಿಗ ಕವಿ ಕಲ್ಪನೆಯ ಚೆಲುವಿಗು-ಮೀರಿದ ಕಾಣುತಲಿಹೆನೀ ಸಿರಿಸಗ್ಗ ಹನಿಯುತಲಿದೆಯೊ ನವ ಸ್ಫೂರ್ತಿಯ ಮಳೆ ಅಮೃತ ಸಲೆಯಾಗಿ ಹರಿಯುತಲಿದೆಯೊ ಸಾಹಿತ್ಯದ ಹೊಳೆ ಕಲಕಲ ದನಿಯಾಗಿ ಹಾಡುತಲಿದೆಯೊ ಕೋಗಿಲೆಯಾ ಮನ...

ಅವ್ವ

ಅವ್ವ ನಿನ್ನ ಮಮತೆಯ ತೊಳ್ ತೆಕ್ಕೆಯಲ್ಲಿ ಹುಟ್ಟಿ ಬೆಳೆದವರು ಬೆಳೆಯುತ್ತಾ ಎತ್ತರದುತ್ತರಕ್ಕೆ ಬೆಳೆದರು ನೀ ಉಣಿಸಿದ ಮೊಲೆ ಹಾಲ ಕುಡಿದು ಮತ್ತೇರಿದವರು. ಹಸಿರ ಹೊನ್ನ ಹೊತ್ತಿಗೆಯಲ್ಲಿ ಪವಡಿಸಿ ತಮ್ಮ ಸ್ವಾರ್ಥಕ್ಕಾಗಿ ಕನಸ ಕಾಣ ತೊಡಗಿದವರು...

ಗೃಹಸ್ಥ

ಕನಸಿನಲ್ಲಿ ಕಂಡಿದ್ದೆನೊಮ್ಮೆ ಚಲುವತಿಯನ್ನು, ಅವಳೊಂದು ಮೃದುಹಾಸ ನನ್ನ ಮನವನು ಸೇರಿ ಅನುದಿನವು ಸಂಚರಿಸುತಿತ್ತು ಹೆಣ್ಣನು ಸಾರಿ ಆ ನಗೆಯು ಅರಳುವುದ ನೋಡಬೇಕೆಂದೆನ್ನ ಕಣ್ಣುಗಳು ಬಯಸಿದುವು. ಓರ್‍ವ ಬಾಲಕಿಯನ್ನ ಆ ನಗೆಯಲಂಕರಿಸಿಹುದ ನೋಡಿ ಕಳೆಯೇರಿ ನನ್ನ...

ಸತ್ಯಶರಣರ ದಾರಿ ಕಂಡು ಕೊಂಡೆ

ಓ ತಂದೆ ಶಿವತಂದೆ ಯುಗಯುಗದ ಗುರುತಂದೆ ನಿನ್ನಿಂದಲೇ ಬೆಳಕು ಬೆಳದಿಂಗಳು ಹಾಲು ಸಾಗರ ನೀನೆ ಪ್ರೇಮ ಸಾಗರ ನೀನೆ ನೀನಿಲ್ಲದೀಭುವನ ಬರಿ ತಂಗಳು ಶಾಂತಿ ಸಾಗರ ನೀನು ಪ್ರೀತಿ ಸಾಗರ ನೀನು ನೀ ಸತ್ಯ...

ಜೀವ-ಜೀವವೇ

ಯಾರ ಬರುವ ಕಾಯುತಿರುವೆ? ಯಾರ ದೆಸೆಗೆ ನೋಯುತಿರುವೆ? ಯಾರಿಗಾಗಿ ಸಾಯುತಿರುವೆ? ಜೀವ ಜೀವವೇ! ದಿನಬೆಳಗೂ ನಿರುಕಿಸುವೆ, ದೆಸೆದೆಸೆಗೂ ಗಿರುಕಿಸುವೆ, ಮೊಗಮೊಗಗಳ ಪರಕಿಸುವೆ, ಜೀವ ಜೀವವೇ! ಕುಣಿವುದಾವ ಲಯಕೆ ನೀನು? ತುಡಿವುದಾವ ಜಗಕೆ ತಾನು? ಆಸೆ-ಬಸಿರ...

ಬೇಲಿ ಮರೆಯಲಿ

ಬೇಲಿ ಮರೆಯಲಿ ಯಾರಿಗೂ ಕಾಣದೆ ನಿಂತು ಬೀಳ್ಕೊಂಡಿತೊಂದು ಜೀವ ದಿನಗಳು ಮುಗಿದುವೊ ತಿಂಗಳು ಉರುಳಿದುವೊ ಒಂದರ ಮೇಲೊಂದು ವರ್‍ಷಗಳು ಸಾಗಿದುವೊ ಆಶಾಢಗಳು ಬಂದು ಹಾದು ಹೋದುವೊ ಶ್ರಾವಣಗಳು ಬಂದು ಕಳೆದು ಹೋದುವೊ ದಸರೆ ದೀಪಾವಳಿಗಳು...

ಹಸು-ಕರು

ಹಸುವಿನ ಹೆಸರು ಯಶೋದಾ ಅದರ ಬಣ್ಣ ಊದಾ ಅದೊಂದು ಕರುವನು ಈದ ಸಂಗತಿಯೇನು ಪ್ರಮಾದ? ಅದರಿಂದೆನಗೀ ಕವಿತೆಯ ಬಾಧ ಪ್ರಾಸವ ಬರೆವ ವಿನೋದ. ನಾನದಕಿತ್ತುದು ನೂರು ರುಪಾಯಿ ಮಧ್ಯಸ್ಥಿಕೆಗಿರೆ ರಂಗಾಬೋಯಿ ನೆರೆಮನೆಯೊಳಗಿದಕಾಯಿತು ಸಾಲ ಬಿತ್ತರಿಸಿತೆಮ್ಮ...

ಬಾಡಿಗೆ ತಾಯ್ತನ

ತಾಯಿ ದೊರಕುತ್ತಾಳೆ ಇಲ್ಲಿ ಅಗ್ಗದ ದರದಲ್ಲಿ ತಾಯಿಯ ತಾಯ್ತನ ಬಂದಿತು ವ್ಯಾಪಾರೀಕರಣದ ಕಕ್ಷೆಗೆ ಜಾಗತೀಕಕರಣದ ಉದ್ಯಮಕೆ. ತಾಯಿಯ ಗರ್‍ಭವೂ ಬಿಡದೆ ಮಾರುಕಟ್ಟೆಗೆ ತಂದಿದ್ದೇವೆ ದುಡ್ಡಿನ ದಣಿಗಳೇ ಬನ್ನಿ ಮಾರಾಟದ ಬೋಲಿಗಳನು ಎಗ್ಗಿಲ್ಲದೆ ಕೂಗಬನ್ನಿ. ಹರಿದು...